ನಾಯಕತ್ವದ ಬಗ್ಗೆ ಇನ್ನು ಮಾತಿಲ್ಲ: ಯಡಿಯೂರಪ್ಪ ಮೌನದ ಮರ್ಮವೇನು?

ರಾಜ್ಯದಲ್ಲಿ ಬಿಜೆಪಿ ನಾಯಕತ್ವದ ಬಗ್ಗೆ ಇನ್ನು ಮುಂದೆ ಮಾತನಾಡುವದಿಲ್ಲ. ಅದೇನಿದ್ದರೂ ಪಕ್ಷದ ಹೈಕಮಾಂಡಿಗೆ ಬಿಟ್ಟ ವಿಚಾರ. ಇನ್ನೇನಿದ್ದರೂ ಪಕ್ಷದ ಸಂಘಟನೆ ಮತ್ತು ರಾಜ್ಯದ ಅಭಿವೃದ್ಧಿ ಕೆಲಸದ ಬಗ್ಗೆ ಅಷ್ಟೇ ಮಾತು ಎಂದು ಹೊಣೆಗಾರಿಕೆಯ ಮಾತನ್ನಾಡಿದ್ದಾರೆ.
ಯಡಿಯೂರಪ್ಪ ಮೌನದ ಮರ್ಮವೇನು?: ಈ ಮೂಲಕ ರಾಜ್ಯದಲ್ಲಿ ಪಕ್ಷದ ನಾಯಕತ್ವ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ. ಸ್ಥಾನಮಾನ ಶಾಶ್ವತ ಆಲ್ಲ. ಇದಕ್ಕಾಗಿ ತಾವು ಎಂದಿಗೂ ಚಿಂತೆ ಮಾಡಿದವರಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸದಾನಂದಗೌಡರಿಗೆ ಮೊದಲಿನ ರೀತಿಯಲ್ಲೇ ಸಹಕಾರ ನೀಡುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮೇಲಿಂದ ಮೇಲೆ ಈ ಪ್ರಶ್ನೆ ಕೇಳಿದರೂ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದರು. ಆದರೆ ಈ ಮೌನದ ಒಳಗುಟ್ಟು ಮಾತ್ರ ಆರ್ಥವಾಗಲಿಲ್ಲ.












Click it and Unblock the Notifications