ಹೊಸ ವರ್ಷದ ಕೊಡುಗೆ: ತೆಲಂಗಾಣ ರಚನೆ ಇಲ್ಲ

ಮತ್ತೊಂದು ಸೂಕ್ಷ್ಮ ವಿಚಾರವೆಂದರೆ, ಕಾಂಗ್ರೆಸ್ ಜತೆ ವಿಲೀನವಾಗುವಂತೆ ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಅವರಿಗೆ ಪಕ್ಷ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದರಿಂದ ತೆಲಂಗಾಣ ರಚನೆಯಿಂದ ಕಾಂಗ್ರೆಸ್ ವಿಮುಖವಾಗಿರುವುದು ಬಹಿರಂಗ ಸತ್ಯ.
ಈ ಮಧ್ಯೆ, 'ಸರ್ವಸಮ್ಮತ ಅಭಿಪ್ರಾಯ ಮೂಡಲಿಲ್ಲ' ಎಂಬ ಕಾರಣ ನೀಡಿ, ಹೊಸ ರಾಜ್ಯ ರಚನೆಯನ್ನು ಮುಂದೂಡುವ ತಂತ್ರವನ್ನು ಕಾಂಗ್ರೆಸ್ ಅನುಸರಿತ್ತಿದೆ ಎಂಬ ಟೀಕೆ ಕೇಳಿಬಂದಿದೆ. ಆದರೆ ಸದ್ಯದಲ್ಲೇ ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬೋತ್ಸಾ ಸತ್ಯಾನಾರಾಯಣ ಅವರನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ 'ಅಂತಿಮ' ಮಾತುಕತೆಗೆ ಆಹ್ವಾನಿಸಲಿದ್ದು, ತೆಲಂಗಾಣ ರಾಜ್ಯ ರಚನೆ ಸಾಧ್ಯವಿಲ್ಲ ಎಂದು ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ತೆಲಂಗಾಣ ರಾಜ್ಯ ರಚನೆ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಕಾಡುತ್ತಿರುವುದು ದಿಟ. ಒಂದೊಮ್ಮೆ ಹೊಸ ರಾಜ್ಯ ರಚನೆ ಸಾಧ್ಯವಾಗದೇ ಹೋದರೆ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಾಗುವಂತೆ ಆಂಧ್ರದ ಕಾಂಗ್ರೆಸ್ ನಾಯಕರಿಗೆ ಇದೇ ಸಭೆಯಲ್ಲಿ ಸಂದೇಶ ರವಾನೆಯಾಗಲಿದೆ.












Click it and Unblock the Notifications