ಚುನಾವಣೆ ಕಾಲೇ ಮಾಯಾನಗರಿಯಲ್ಲಿ 4ಸಚಿವರು ಮನೆಗೆ

ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಕಳಂಕಿತರನ್ನು ಅಧಿಕಾರದಿಂದ ದೂರವಿರಿಸಿ, ಸರ್ಕಾರದ ವರ್ಚಸ್ಸು ಹೆಚ್ಚಿಸುವ ಪ್ರಯತ್ನ ಇದಾಗಿದೆ. ಚುನಾವಣೆ ಹೊತ್ತಿಗೆ ಸರ್ಕಾರದ ವರ್ಚಸ್ಸನ್ನು ಮರುಸ್ಥಾಪಿಸಲು ಈಚೆಗಷ್ಟೆ ಐವರು ಸಚಿವರನ್ನು ಮಾಯಾವತಿ ಮಂತ್ರಿ ಮಂಡಲದಿಂದ ಕೈಬಿಟ್ಟಿದ್ದರು.
ಆದರೆ ಈ ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಡುವಂತೆ ರಾಜ್ಯಪಾಲರಿಗೆ ಬರೆದಿರುವ ಶಿಫಾರಸು ಪತ್ರದಲ್ಲಿ ಯಾವುದೇ ನಿರ್ದಿಷ್ಟ ಕಾರಣಗಳನ್ನು ಮುಖ್ಯಮಂತ್ರಿ ಉಲ್ಲೇಖಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ನಾಲ್ವರು ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ವಿವಾದಕ್ಕೆ ಕಾರಣರಾಗಿದ್ದಾರೆ. ತ್ರಿಪಾಠಿ ವಿರುದ್ಧ ಲೋಕಾಯುಕ್ತರು ತನಿಖೆ ಕೂಡ ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳು ಈ ನಾಲ್ವರು ಸಚಿವರ ರಾಜೀನಾಮೆಗೆ ಬಹು ಕಾಲದಿಂದ ಒತ್ತಾಯಿಸುತ್ತಿದ್ದವು.
ಉನ್ನತ ಶಿಕ್ಷಣ ಸಚಿವ ರಾಕೇಶ್‌ಧರ್ ತ್ರಿಪಾಠಿ, ಕೃಷಿ, ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ಸಚಿವ ರಾಜಪಾಲ್ ತ್ಯಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಸಚಿವ ಅವಧೇಶ್ ವರ್ಮಾ ಮತ್ತು ಗೃಹ ಇಲಾಖೆ ರಾಜ್ಯ ಖಾತೆ ಸಚಿವ ಗೌರದ್ ಹರಿ ಓಂ ಅಧಿಕಾರ ಕಳೆದುಕೊಂಡ ಸಚಿವರು.












Click it and Unblock the Notifications