ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ನಗರ ಪಾಲಿಕೆ ಹಿನ್ನೋಟ-ಮುನ್ನೋಟ

By Mahesh
|
Google Oneindia Kannada News

Udupi CMC
ಮಣಿಪಾಲ, ಡಿ.26: ಮಣಿಪಾಲದ ರಜತಾದ್ರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಉಡುಪಿ ಜಿಲ್ಲಾ ಕಚೇರಿ ಸಂಪೂರ್ಣ ಕಾಗದ ರಹಿತ ಕಚೇರಿಯಾಗಲಿದೆ. 75 ವರ್ಷದ ಸಂಭ್ರಮ ಕಂಡಿರುವ ನಗರ ಪಾಲಿಕೆಯ ಮುಂದಿನ ಯೋಜನೆಗಳಿಗೆ ಸೂಕ್ತ ಅನುದಾನ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹರ್ಷದಿಂದ ಹೇಳಿದರು.

ಸುಮಾರು 27 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾ ಕಚೇರಿ ಸಂಕೀರ್ಣ ಸುಮಾರು 15 ಎಕರೆಯಲ್ಲಿ ವಿಸ್ತಾರ ಹೊಂದಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿ ಸಂಪೂರ್ಣ ಗಣಕೀಕೃತ ಕಚೇರಿಯಾಗಲಿದೆ. ಕಂದಾಯ, ಆರ್‌ಟಿಒ ಹೊರತುಪಡಿಸಿ ಉಳಿದೆಲ್ಲವೂ ಜಿಲ್ಲೆಯ ಜನರಿಗೆ ಒಂದೇ ಕಡೆ ಸರ್ಕಾರಿ ಕಚೇರಿ ಲಭ್ಯವಾಗುತ್ತವೆ.

ಸುಮಾರು ಉಡುಪಿ ನಗರ ಪಾಲಿಕೆಗೆ ಸುಮಾರು 2 ಕೋಟಿ ರು ಮಂಜೂರು ಮಾಡಲಾಗಿದೆ. ಪರ್ಯಾಯ ಮಹೋತ್ಸವ ಹತ್ತಿರ ಇರುವುದರಿಂದ ಇನ್ನೊಂದು ಕೋಟಿ ರು ಹೆಚ್ಚಿಗೆ ನೀಡಲು ಸರ್ಕಾರ ಮನಸ್ಸು ಮಾಡಿದೆ.

ಮುಂದಿನ ಯೋಜನೆಗಳು: ಎಲ್ಲಾ ಕಚೇರಿಗಳಲ್ಲೂ ಇ ಆಡಳಿತ ಜಾರಿಗೊಳಿಸುವುದು. ಚತುಷ್ಪಥ ರಸ್ತೆ ನಿರ್ಮಾಣ ಯೋಜನೆ, ನಿರಂತರ ಕುಡಿಯುವ ನೀರಿನ ಯೋಜನೆ, ಒಳ ಚರಂಡಿ ಯೋಜನೆ ಮುಂತಾದ ಯೋಜನೆಗಳು ಆಗಲೇ ಪ್ರಗತಿಯಲ್ಲಿದೆ ಎಂದು ಮಣಿಪಾಲ್ ವಾರ್ಡ್ ಸದಸ್ಯ ದೇವೇಂದ್ರ ನಾಯಕ್ ಅವರು ತಿಳಿಸಿದ್ದಾರೆ.

ಉಡುಪಿ ನಗರ ಸಭೆ ಮಾಹಿತಿ:

* ಬ್ರಿಟಿಷ್ ಕಾಲದಲ್ಲಿಯೇ ಉಡುಪಿಗೆ ನಗರಸಭೆಯಾಗಿ ರೂಪುಗೊಂಡಿತ್ತು. ರಾಜ್ಯದಲ್ಲಿನ ಪುರಾತನ ನಗರಸಭೆಗಳಲ್ಲಿ ಇದು ಒಂದಾಗಿದೆ.
* 01-04-1935 ರಂದು ತಾಲೂಕು ಬೋರ್ಡ್ ವಿಸರ್ಜನೆಗೊಂಡು ಜಿಲ್ಲಾ ಬೋರ್ಡ್ ರಚನೆಯಾದ ನಂತರ ಉಡುಪಿಯ ರಸ್ತೆ ಬೀದಿ ದೀಪ, ಸ್ವಚ್ಛತೆಯ ದೃಷ್ಟಿಯಿಂದ ಶ್ರೀಕೃಷ್ಣ ದೇವಸ್ಥಾನದಿಂದಾಗಿ ಪ್ರಸಿದ್ಧ ಯಾತ್ರಾ ಸ್ಥಳವಾದ್ದರಿಂದ ಅಂದಿನ ಮದ್ರಾಸ್ ಸರ್ಕಾರ 01-11-1935 ರಿಂದ ನಗರಸಭೆ ರಚನೆಯ ಘೋಷಣೆಯನ್ನು ಪ್ರಕಟಿಸಿತು.

* 01-11-1935 ರಂದು ಏಳು ಗ್ರಾಮಗಳ ಭಾಗಗಳನ್ನೊಳಗೊಂಡು ಸುಮಾರು 17,251 ಜನಸಂಖ್ಯೆಯೊಂದಿಗ 3.75 ಚದರ ಮೈಲು ಪ್ರದೇಶದಲ್ಲಿ ನಗರಸಭೆ ಅಸ್ತಿತ್ವಕ್ಕೆ ಬಂದಿತು.
* ಪ್ರಥಮ ಚುನಾಯಿತ ಮಂಡಳಿ 31-08-1936 ರಂದು ಉಡುಪಿ ನಗರದ ಗಣ್ಯರು ಸುಪ್ರಸಿದ್ಧ ವಕೀಲರೂ ಆಗಿದ್ದ ಆರೂರು ಲಕ್ಷ್ಮೀನಾರಾಯಣ ರಾವ್ ರವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿತು.
* ಪ್ರಸ್ತುತ 35 ವಾರ್ಡ್ ಗಳಿದ್ದು, 2001ರ ಜನಗಣತಿಯಂತೆ 1,13,039 ಜನಸಂಖ್ಯೆ ಹೊಂದದೆ. 69.28 ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ.
* ಉಡುಪಿ ನಗರಸಭೆಯ ಕಾರ್ಯಾಲಯವು ನಗರದ ಹೃದಯ ಭಾಗದಲ್ಲಿದೆ. ಐತಿಹಾಸಿಕವೂ ಧಾರ್ಮಿಕವೂ ಆದ ಉಡುಪಿ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಮಾನ್ಯತೆ ಹೊಂದಿದೆ.

English summary
Udupi City Municipal Council is set to become the first fully computerised district office in the state said Chief Minister DV Sadananda Gowda last day(Dec.25). Brief history on Udupi CMC and its future plans. Sadananda Gowda released Rs 30 crore for office makeover. Udupi CMC to get Rs two crore for various developement activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X