ಯಡಿಯೂರಪ್ಪಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಲ್ಲ

Yeddyurappa rakes up leadership issue
ದಾವಣಗೆರೆ, ಡಿ. 23 : "ಸಾಮೂಹಿಕ ನಾಯಕತ್ವದಲ್ಲಿ ನನಗೆ ನಂಬಿಕೆ ಇಲ್ಲವೇ ಇಲ್ಲ. ತಂಡಕ್ಕೆ ಯಾವತ್ತಿದ್ದರೂ ಒಬ್ಬನೇ ನಾಯಕನಿರಬೇಕು" ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತಮ್ಮದೇ ನಾಯಕತ್ವದಲ್ಲಿ ಬಿಜೆಪಿ ನಡೆಯಬೇಕು ಎಂಬ ಸ್ಪಷ್ಟ ಸಂದೇಶವನ್ನು ವರಿಷ್ಠರಿಗೆ ರವಾನಿಸಿದ್ದಾರೆ.

ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದೇ ಹೇಳುತ್ತ ಬಂದಿರುವ ಯಡಿಯೂರಪ್ಪ, ಮತ್ತೆ ಏಕವ್ಯಕ್ತಿ ನಾಯಕತ್ವದ ಚರ್ಚೆಯನ್ನು ಆರಂಭಿಸಿರುವುದು ಅವರನ್ನು ಬಲ್ಲವರಿಗೆ ಅಚ್ಚರಿಯನ್ನೂ ತರುವುದಿಲ್ಲ. ಈ ಕುರಿತಾಗಿ ಹೈಕಮಾಂಡಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ದಾವಣಗೆರೆಯಲ್ಲಿ ಶುಕ್ರವಾರ ಹೇಳಿದರು.

ಶ್ರೀರಾಮುಲು ಬಿಜೆಪಿಗೆ ಬರಲಿ : ಹೊಸ ಪಕ್ಷ ಕಟ್ಟಲು ತಯಾರಿ ನಡೆಸಿರುವ ಶ್ರೀರಾಮುಲುವನ್ನು ಮತ್ತೆ ಬಿಜೆಪಿಗೆ ವಾಪಸ್ ತರುವ ಪ್ರಾಮಾಣಿಕ ಪ್ರಯತ್ನ ಬಿಜೆಪಿ ಮಾಡಬೇಕು. ನಾನು ಶ್ರೀರಾಮುಲು ಜೊತೆಗೆ ಸತತವಾಗಿ ಸಂಪರ್ಕದಲ್ಲಿದ್ದೇನೆ. ಅವರು ವಾಪಸ್ ಬರುತ್ತಾರೆ ಎಂಬ ಭರವಸೆಯೂ ಇದೆ ಎಂದು ಯಡಿಯೂರಪ್ಪ ನುಡಿದರು.

ದೆಹಲಿಯಲ್ಲಿ ಡಿವಿಎಸ್ : ಈ ನಡುವೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ದೆಹಲಿಗೆ ತೆರಳಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದರು. ವಾಜಪೇಯಿ ಅವರ ನಿವಾಸಕ್ಕೂ ತೆರಳಿರುವ ಅವರು, ಮಾಜಿ ಪ್ರಧಾನಿಯ ಉಭಯ ಕುಶಲೋಪರಿ ವಿಚಾರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+