ಲಂಡನ್‌ನಿಂದ ಹಾರಿಬಂದ ಕಟ್ಟಾಗೆ ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ
ಬೆಂಗಳೂರು,
ಡಿ. 23: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಲಂಡನ್‌ನಿಂದ ಹಾರಿಬಂದು, ಮುಖ್ಯಮಂತ್ರಿ ಸದಾನಂದ ಗೌಡರ ಗೆಲುವಿಗೆ ಮೆಟ್ಟಿಲಾಗಿದ್ದಾರೆ. ಬಿಳಿ ಗಡ್ಡ ಹೊತ್ತು, ತೀರಾ ಬಳಲಿದಂತೆ ಕಂಡುಬಂದ ಕಟ್ಟಾ ಸುಬ್ರಮಣ್ಯ 'ಅನಾರೋಗ್ಯದ ನಿಮಿತ್ತ ಲಂಡನ್‌ಗೆ ತೆರಳಿದ್ದೆ. ಚಿಕಿತ್ಸೆ ಪಡೆಯುತ್ತಿದ್ದು, ಜ.2ರಂದು ಮತ್ತೆ ಅಲ್ಲಿಗೆ ಹೋಗುತ್ತೇನೆ' ಎಂದು ಹೇಳಿದ್ದಾರೆ. id="toptextpromo">ಕ್ಯಾನ್ಸರ್
ಚಿಕಿತ್ಸೆಗಾಗಿ ಜಾಮೀನಿನ ಮೇಲೆ ಸೀದಾ ಪರಪ್ಪನ ಅಗ್ರಹಾರದಿಂದ ಲಂಡನ್‌ಗೆ ತೆರಳಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗುರುವಾರ ಮತದಾನ ಮಾಡುವುದು ಅನಿವಾರ್ಯವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ತಟಸ್ಥ ನಿಲುವು ತಾಳುವ ಮೂಲಕ ಸದಾನಂದ ಗೌಡರ ಗೆಲುವನ್ನು ಸುಲಲಿತಗೊಳಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಆದರೂ
ಬುಧವಾರ ರಾತ್ರಿ ನಗರಕ್ಕೆ ಆಗಮಿಸಿದ್ದರು. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ನಂತರ ಅವರೊಟ್ಟಿಗೇ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು.











Click it and Unblock the Notifications