ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ- ತೆನೆ ಜಗಳ, ಅರಳಿದ ಸದಾನಂದರ ಮುಖಾರವಿಂದ

By Mahesh
|
Google Oneindia Kannada News

DV Sadananda gowda
ಬೆಂಗಳೂರು, ಡಿ.22: ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಗುರುವಾರ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡ ಅವರು ಭರ್ಜರಿ ಜಯಗಳಿಸುವುದು ಖಾತ್ರಿಯಾಗಿದ್ದು, ವಿಜಯದ ಘೋಷಣೆ ಮಾತ್ರ ಬಾಕಿ ಉಳಿದಿದೆ. ಫಲಿತಾಂಶದ ಸಂಪೂರ್ಣ ವಿವರಗಳಿಗಾಗಿ ಒನ್ ಇಂಡಿಯಾ ಕನ್ನಡವನ್ನು ನೋಡುತ್ತಿರಿ

ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಪಕ್ಷೇತರ ಶಾಸಕರ ಬೆಂಬಲ ನೀಡುವುದಾಗಿ ಹೇಳಿದ್ದ ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿ ಅವರು ಮಾತು ಉಳಿಸಿಕೊಂಡಿದ್ದಾರೆ.

ಕಾಂಗ್ರೆಸ್ ಗೆ ಕೈ ಕೊಟ್ಟು ತಕ್ಕಪಾಠ ಕಲಿಸಲು ಬಯಸಿದ ಜಾತ್ಯಾತೀತ ಜನತಾದಳ ತಟಸ್ಥ ನೀತಿ ಅನುಸರಿಸಿ ಸದಾನಂದಗೌಡರ ವಿಜಯಕ್ಕೆ ಪರೋಕ್ಷವಾಗಿ ತನ್ನ ಕಾಣಿಕೆ ನೀಡಿದೆ.

ಸಂಕ್ರಾಂತಿ ಕಳೆಯುವವರೆಗೂ ಕ್ರಾಂತಿ ಮಾಡುವುದಿಲ್ಲ ಎಂದು ಶಪಥ ಮಾಡಿರುವ ಯಡಿಯೂರಪ್ಪ ಬಣ ಕೂಡಾ ಯಾವುದೇ ಕಿತಾಪತಿ ಕೆಲಸಕ್ಕೆ ಕೈ ಹಾಕದೆ ಸದಾನಂದ ಗೌಡರಿಗೆ ಮತ ಹಾಕಿದೆ.

119 ಬಿಜೆಪಿ ಶಾಸಕರನ್ನು ರೆಸಾರ್ಟ್ ನಲ್ಲಿ ಕಾಯ್ದ ಪಕ್ಷಾಧ್ಯಕ್ಷ ಕೆಎಸ್ ಈಶ್ವರಪ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಡಿವಿಎಸ್ ಗೆಲುವು ನನ್ನ ಗೆಲುವು ಎಂಬಂತೆ ಸಂಭ್ರಮದಿಂದ ಓಡಾಡುತ್ತಿದ್ದಾರೆ.

ಮೊದಲ ಮತದಾನ ಮಾಡಿದ ಶಾಸಕ ಸಿಟಿ ರವಿ ಮಾತ್ರ ಮುಖಕ್ಕೆ ಮಸಿ ಬಳಿದು ಕೊಂಡಂತೆ ವಿಧಾನ ಸೌಧದಿಂದ ಕಾಣೆಯಾಗಿದ್ದಾರೆ. ಲೋಕಾಯುಕ್ತ ಪೊಲೀಸರ ತನಿಖೆಗೆ ಭೀತಿಯಲ್ಲಿ ರವಿ ಒದ್ದಾಡುತ್ತಿದ್ದಾರೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಬಣಕ್ಕೆ ಜಗದೀಶ್ ಶೆಟ್ಟರ್ ಕೊಟ್ಟ ಇಶಾರೆ ವರ್ಕ್ ಔಟ್ ಆಗಿದೆ. ಒಟ್ಟಿನಲ್ಲಿ ಸದಾನಂದ ಗೌಡರ ಲಕ್ ಸಕತ್ತಾಗಿದ. ಮುಖ್ಯಮಂತ್ರಿ ಪಟ್ಟ ಉಳಿಸಿಕೊಂಡು ಎಲ್ಲರನ್ನು ಬೆಳೆಸಿ ತಾನು ಬೆಳೆಯಬೇಕು ಎನ್ನುವ ಅವರ ಧ್ಯೇಯ ಎಲ್ಲರಿಗೂ ಸದ್ಯಕ್ಕೆ ಹಿತವಾಗಿ ಕಂಡಿದೆ.

English summary
Karnataka MLC Election : DV Sadananda Gowda is likely to win the poll after getting the independent MLAs support. JDS is having neutral stand on the issue. 71 Congress MLAs didn't get enough support to give tough fight to BJP candidate Sadananda Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X