ಬಿಕ್ಕಟ್ಟು ಶಮನ, ರೆಸಾರ್ಟ್ ರಾಜಕೀಯ ಇನ್ನಿಲ್ಲ: ಈಶ್ವರಪ್ಪ

ನಗರದ ಹೊರವಲಯದಲ್ಲಿನ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಶಾಸಕರಿಗೆ ಹಿರಿಯ ನಾಯಕರು ನೀಡಿದ ಹಿತೋಪದೇಶ ಕೆಲಸ ಮಾಡುತ್ತಿದೆ.
ನಮಗೆ ಎಲ್ಲ ಶಾಸಕರ ಬಗ್ಗೆ ವಿಶ್ವಾಸವಿದೆ. ಹೀಗಾಗಿ ಇನ್ನು ಮುಂದೆ ರೆಸಾರ್ಟ್‌ಗಳಲ್ಲಿ ಸಭೆ ನಡೆಸುವುದು ಬೇಡ ಎಂಬ ತೀರ್ಮಾನ ಒಮ್ಮತದಿಂದ ಸಮ್ಮತಿ ಸಿಕ್ಕಿದೆ.
ಶಾಸಕರ ಭವನದಲ್ಲೇ ಇನ್ಮುಂದೆ ಸಭೆ ನಡೆಸಲಾಗುವುದು ಎಂದು ಈಶ್ವರಪ್ಪ ಹೇಳಿದರು. ಡಿವಿ ಸದಾನಂದ ಗೌಡರು ಕೂಡಾ ಇಂದು ಬೆಳಗ್ಗೆ ಉಪಾಹರ ಸೇವಿಸುತ್ತಾ ಇದೆ ಮಾತುಗಳನ್ನಾಡಿದರು. ಪಕ್ಷದಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ಮುನ್ನೆಡೆಸುವ ಜವಾಬ್ದಾರಿ ನನ್ನ ಮೇಲಿದೆ. ಎಲ್ಲರ ಸಹಕಾರದಿಂದ ಅಭಿವೃದ್ಧಿಯತ್ತ ರಾಜ್ಯವನ್ನು ಕೊಂಡೊಯ್ಯುವ ಭರವಸೆ ನನಗಿದೆ ಎಂದರು.












Click it and Unblock the Notifications