ಮೈಸೂರಲ್ಲಿ 100 ಕೋಟಿ ವೆಚ್ಚದ ಬಯೋಟೆಕ್ ಪಾರ್ಕ್

ಬಯೋಟೆಕ್ನಾಲಜಿ ಕ್ಷೇತ್ರದ ರಾಣಿ ಕಿರಣ್ ಮಜುಂದಾರ್ ಶಾ ಅವರು ಮಾಡಿರುವ ಶಿಫಾರಸಿನಂತೆ ರಾಜ್ಯದ ಎರಡನೇ ಹಾಗೂ ಮೂರನೇ ಸ್ತರದ ನಗರಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ, ಬಯೋಟೆಕ್ನಾಲಜಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂಎನ್ ವಿದ್ಯಾಶಂಕರ್ ಹೇಳಿದರು.
ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ್ದು, ಬಯೋ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕ್ರಾಂತಿಯಾಗಲಿದೆ.
ಜೆಎಸ್ಎಸ್ ಮಹಾವಿದ್ಯಾಪೀಠ ಯಶಸ್ವಿ ಬಿಡ್ಡರ್ ಗಳಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಆಸಕ್ತಿ ತೋರಿಸಿದ್ದಾರೆ. ಬೆಂಗಳೂರು, ಮೈಸೂರ, ಮಣಿಪಾಲ್, ಮಂಗಳೂರು ಹಾಗೂ ಗುಲ್ಬರ್ಗಾದ ಶಾಲೆಗಳನ್ನು ಡಾ.ಜಿ ಪದ್ಮನಾಭನ್ ಅವರ ಸಮಿತಿ ಗುರುತಿಸಿದ್ದು, ಬಯೋಟೆಕ್ ಜ್ಞಾನವುಳ್ಳ ವಿದ್ಯಾರ್ಥಿಗಳನ್ನು ಹೊರ ತರಲು ಯೋಜನೆ ಸಹಕಾರಿಯಾಗಲಿದೆ ಎಂದು ವಿದ್ಯಾಶಂಕರ್ ಹೇಳಿದರು.












Click it and Unblock the Notifications