ಜಯಪ್ರದಾ ಮತ್ತೆ ಕಣಕ್ಕೆ, ರಂಗೇರಿದೆ ಉತ್ತರ ಪ್ರದೇಶ

ರಾಮ್ ಪುರದ ಸಂಸದೆ ಜಯಪ್ರದಾ ಹಾಗೂ ಅಜಂ ಖಾನ್ ನಡುವೆ ಅನೇಕ ಜಗಳ ಕದನಗಳು ನಡೆದಿದ್ದು ಸರ್ವವಿದಿತ.
2009ರ ಸಂಸದೀಯ ಚುನಾವಣೆಯಲ್ಲಿ ಮುಂಬೈ ಎಟಿಎಸ್ ಕಾಪ್ ಹುತಾತ್ಮ ಹೇಮಂತ್ ಕರ್ಕರೆ ಪತ್ನಿ ಕವಿತಾ ಕರ್ಕರೆ ಅವರಿಗೆ ಎಸ್ ಪಿ ಟಿಕೆಟ್ ನೀಡಲು ಅಜಂ ಖಾನ್ ಮುಂದಾಗಿದ್ದರು.
ಆದರೆ, ಈ ಐಡ್ಯಾವನ್ನು ತಳ್ಳಿ ಹಾಕಿದ ಎಸ್ ಪಿ ರಾಮಪುರ್ ಕ್ಷೇತ್ರದಿಂದ ಜಯಪ್ರದಾರನ್ನು ನಿಲ್ಲಿಸಿ ಗೆಲ್ಲಿಸಲಾಗಿತ್ತು.
ಅಜಂ ಖಾನ್ ಅಸೆಂಬ್ಲಿ ಪ್ರವೇಶ ತಡೆಯಲು ಬೇಕಾದ ಎಲ್ಲಾ ಸಿದ್ದತೆ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಸಿಂಗ್ ಹೇಳಿದ್ದಾರೆ.
ಪಕ್ಷದ ಹಿತದೃಷ್ಟಿಗೆ ಅನುಗುಣವಾಗಿ ನಾನು ವರ್ತಿಸುತ್ತೇನೆ. ಪಕ್ಷ ಬಯಸಿದರೆ ಅಜಂ ಖಾನ್ ವಿರುದ್ಧ ಸ್ಪರ್ಧೆಗೆ ಇಳಿಯಲು ನಾನು ಸಿದ್ಧ ಎಂದು ನಟಿ ಕಮ್ ಸಂಸದೆ ಜಯಪ್ರದಾ ಘೋಷಿಸಿದ್ದಾರೆ.












Click it and Unblock the Notifications