ಅಣ್ಣಾ ಹೋರಾಟಕ್ಕೆ ಹೆಂಡದ ದೊರೆ ಮಲ್ಯ ಕೊಂಕು

anna-should-not-accuse-upa-of-fooling-him-mallya
ಬೆಂಗಳೂರು, ಡಿ. 19: ಜಾಗತಿಕ ಚಿಂತಕ, ಭ್ರಷ್ಟಾಚಾರ ವಿರೋಧಿ ಹಿರಿಯಣ್ಣ ಹಜಾರೆ ಬಗ್ಗೆ ಹೆಂಡದ ದೊರೆ, ಅಗ್ರಮಾನ್ಯ ಸಾಲಗಾರ ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ ವಿಜಯ್ ಮಲ್ಯ ಕಿಡಿಕಾರಿದ್ದಾರೆ. ತಮ್ಮ 56ನೇ ಹುಟ್ಟುಹಬ್ಬದಂದು (ಡಿ.18) ಮಲ್ಯ ಸಾಹೇಬರು ಈ ಮಾತುಗಳನ್ನಾಡಿದ್ದಾರೆ.

ಹಿರಿಯಣ್ಣ ಹಜಾರೆಯ ಭ್ರಷ್ಟಾಚಾರ ವಿರೋಧಿ ಬಗ್ಗೆ ಮಲ್ಯ ಲಘುವಾಗಿ ಮಾತನಾಡಿದ್ದಾರೆ. ಯುಪಿಎ ಸರಕಾರ ಮತ್ತು ಲೋಕಪಾಲ ಅಣ್ಣಾ ತಂಡದ ಮಧ್ಯೆ ಆಗಾಗ್ಗೆ ಸಂಭವಿಸುತ್ತಿರುವ ಸಂಘರ್ಷಗಳ ಬಗ್ಗೆ ಕಟುವಾಗಿ ವ್ಯಾಖ್ಯಾನಿಸಿದ್ದಾರೆ.

ಜನ ಲೋಕಪಾಲ ಮಸೂದೆ ಜಾರಿ ವಿಷಯದಲ್ಲಿ ಸರಕಾರ ತಮ್ಮನ್ನು ಅನೇಕ ಬಾರಿ ಮೂರ್ಖರನ್ನಾಗಿಸಿದೆ. ಇನ್ನು ಇದನ್ನು ಸಹಿಸಲಾಗದು ಎಂದು ಅಂತಿಮ ಎಚ್ಚರಿಕೆ ನೀಡಿರುವ ಅಣ್ಣಾ ಸದ್ಯದಲ್ಲೇ ಮತ್ತೆ ಉಪವಾಸ ನಡೆಸುವುದಾಘಿ ಕೇಂದ್ರಕ್ಕೆ ಎಚ್ಚರಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಟ್ವಿಟ್ಟರ್ ಮೂಲಕ ಅಣ್ಣಾ ಪ್ರಯುತ್ನಗಳ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಲ್ಯ, ಸರಕಾರ ತಮ್ಮನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಅಣ್ಣಾಜಿ ದೂರುವಂತಿಲ್ಲ. ಏಕೆಂದರೆ ಸ್ವತಃ ಅಣ್ಣಾ ಅವರೇ ದೇಶವನ್ನು ಎಷ್ಟು ಬಾರಿ ಮೂರ್ಖರನ್ನಾಗಿಸಿದ್ದಾರೆ ಎಂಬುದನ್ನು ಲೆಕ್ಕ ಹಾಕಲಿ ಎಂದು ಭಾನುವಾರ ರಜಾ ಮೂಡಿನಲ್ಲಿ ವಿವಾದಕ್ಕೆ ಕಿಚ್ಚು ಹಚ್ಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+