ಟಿಎಸ್ ಸತ್ಯನ್ ಸ್ಮಾರಕ ಸುದ್ದಿಕಣ್ಣು ಪ್ರಶಸ್ತಿ ಪ್ರದಾನ

ಕರ್ನಾಟಕದ ಖ್ಯಾತ ಆರು ಛಾಯಾ ಪತ್ರಕರ್ತರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ದಿವಂಗತ ಟಿ ಎಸ್ ಸತ್ಯನ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿದರು.

ಭಾನುವಾರ ಬೆಳಗ್ಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ನಗದು ಪುರಸ್ಕಾರ, ಪ್ರಮಾಣಪತ್ರ ಮತ್ತು ಶಾಲುಹೊದಿಸಿ ಟಿಎಸ್ ಸತ್ಯನ್ ಸ್ಮಾರಕ ಪ್ರಶಸ್ತಿ ಕೊಡಮಾಡಲಾಯಿತು

ಚುರುಮುರಿ ಬ್ಲಾಗ್ ಮತ್ತು ಕರ್ನಾಟಕ ಫೋಟೊ ನ್ಯೂಸ್(ಕೆಪಿಎನ್) ಜಂಟಿಯಾಗಿ ತಂಬ್ರಹಳ್ಳಿ ಸುಬ್ರಮಣ್ಯ ಸತ್ಯನಾರಾಯಣ ಅಯ್ಯರ್ (ಟಿಎಸ್ ಸತ್ಯನ್) ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿದೆ.

ಕೆಪಿಎನ್ ಸಂಸ್ಥೆಯ 8ನೇ ವಾರ್ಷಿಕೋತ್ಸವ ಮತ್ತು ಟಿಎಸ್ ಸತ್ಯನ್ 88ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸುದ್ದಿಗೆ ಕಣ್ಣಾಗುವ ಛಾಯಾಚಿತ್ರಕಾರರಿಗೆ ಪ್ರಶಸ್ತಿ ವಿತರಣೆ ಸಮಾರಂಭ ನಡೆದದ್ದು ವಿಶೇಷ.

ಫೋಟೊ ಜರ್ನಲಿಸ್ಟ್ ಆಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಜ್ಞ ಮಂಗಳೂರು, ಅತ್ಯುತ್ತಮ ದಿನಪತ್ರಿಕೆ ಛಾಯಾಗ್ರಾಹಕರಾಗಿ ದಿ ಹಿಂದೂ ಪತ್ರಿಕೆಯ ಕೆ. ಗೋಪಿನಾಥನ್ ಸ್ವೀಕರಿಸಿದರು. ಉತ್ತಮ ನಿಯತಕಾಲಿಕೆ ಛಾಯಗ್ರಾಹಕರಾಗಿ ದಿ ವೀಕ್ ಪತ್ರಿಕೆಯ ಭಾನು ಪ್ರಕಾಶ್ ಚಂದ್ರ ಪ್ರಶಸ್ತಿ ಪಡೆದರು.

ಅತ್ಯುತ್ತಮ ವೃತ್ತಿಪರ ಛಾಯಾಗ್ರಾಹಕ ಪ್ರಶಸ್ತಿಯನ್ನು ದಿ ಟೈಮ್ಸ್ ಆಫ್ ಇಂಡಿಯಾ ಮೈಸೂರು ವಿಭಾಗದ ನೇತ್ರ ರಾಜು ಪಡೆದಿದ್ದಾರೆ. ಅತ್ಯುತ್ತಮ ಹವ್ಯಾಸಿ ಛಾಯಗ್ರಾಹಕ ಪ್ರಶಸ್ತಿಯನ್ನು ಬೆಂಗಳೂರಿನ "ರಿಗ್ರೆಟ್ ಅಯ್ಯರ್ ಮತ್ತು ಉತ್ತಮ ಆನ್ ಲೈನ್ ಛಾಯಾಗ್ರಾಹಕರಾಗಿ ಎಮ್ ಎಸ್ ಗೋಪಾಲ್ ಪ್ರಶಸ್ತಿ ಪಡೆದಿದ್ದಾರೆ. (ಇವರೆಲ್ಲರ ಬಗ್ಗೆ ಓದಿ )

ಖ್ಯಾತ ಪತ್ರಕರ್ತ ಮತ್ತು ಅಂಕಣಕಾರ ಪದ್ಮಶ್ರೀ ಟಿ ಜೆಎಸ್ ಜಾರ್ಜ್ ಮತ್ತು ಪ್ರಜಾವಾಣಿ ಸಂಪಾದಕ ಕೆ ಎನ್ ಶಾಂತ ಕುಮಾರ್ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೆಪಿಎನ್ ಸಂಸ್ಥೆಯ ಸಂಪಾದಕ ಸಾಗ್ಗೆರೆ ರಾಮಸ್ವಾಮಿ ವೇದಿಕೆಯಲ್ಲಿದ್ದರು. ವಾಸಂತಿ ಅವರ ಕಾರ್ಯಕ್ರಮ ನಿರೂಪಣೆ ವೆರಿ ಗುಡ್.

ಮಾಧ್ಯಮಗಳೊಂದಿಗೆ ಮುಕ್ತವಾಗಿ ಮಾತನಾಡುವ ಬಯಕೆ ವ್ಯಕ್ತಪಡಿಸಿದ ರಾಜ್ಯಪಾಲ ಹಂಸರಾಜ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+