ಬೆಂಗಳೂರು ಅನೇಕಲ್ ನಲ್ಲಿ ಗುಂಡಿಟ್ಟು ಯುವಕನ ಹತ್ಯೆ

ಕೃಷ್ಣ ಅಲಿಯಾಸ್ ಕೋತಿ ಕೃಷ್ಣ ಎಂಬಾತ ಗುಂಡು ಹಾರಿಸಿದ ಆರೋಪಿ. ಜಮೀನು ವಿವಾದವೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಮೃತ ರಮೇಶ್, ರೆಡ್ಡಿ ಜನಸಂಘದ ತಾಲೂಕು ಘಟಕದ ಅಧ್ಯಕ್ಯರಾಗಿದ್ದರು.
ರಮೇಶ್ ಮತ್ತು ಕೃಷ್ಣ ಅವರ ಮಧ್ಯೆ ಇಂದು ಬೆಳಗ್ಗೆ ಜಮೀನು ವಿವಾದದ ಸಂಬಂಧದ ಮಾತುಕತೆ ನಡೆದಿದೆ. ಮಾತಿನ ಚಕಮಕಿ ತಾರಕಕ್ಕೆ ಹೋದಾಗ ಕೃಷ್ಣನನ್ನು ರಮೇಶ್ ಸಮಾಧಾನಪಡಿಸಲು ಯತ್ನಿಸಿದ. ಆದರೆ ಕೋಪೋದ್ರಿಕ್ತ ಕೃಷ್ಣ, ರಮೇಶನತ್ತ ಗುಂಡು ಹಾರಿಸಿದ. ಗುಂಡು ರಮೇಶನ ಎಡಗೈ ತೋಳಿನತ್ತ ಹಾರಿ, ನೇರವಾಗಿ ಹೃದಯವನ್ನು ಛಿದ್ರಗೊಳಿಸಿದೆ. ರಮೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಷ್ಟಕ್ಕೇ ಸುಮ್ಮನಾಗದ ಆರೋಪಿ ಕೃಷ್ಣ ಇನ್ನೂ ಒಂದು ಗುಂಡು ಹಾರಿಸಿದಾಗ ರಮೇಶನ ಸಮೀಪ ನಿಂತಿದ್ದ ವ್ಯಕ್ತಿಯತ್ತ ಹಾರಿ, ಆತನನ್ನು ತೀವ್ರವಾಗಿ ಗಾಯಗೊಳಿಸಿದೆ. ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.












Click it and Unblock the Notifications