ಮುಲ್ಲಪೆರಿಯಾರ್ : ತಮಿಳುನಾಡು ಕೇರಳ ಧಗಧಗ

Mullaperiyar dam in Tamilnadu
ಮದುರೈ, ಡಿ. 16 : ಕೇರಳದಲ್ಲಿರುವ 116 ವರ್ಷ ಹಳೆಯ ಮುಲ್ಲಪೆರಿಯಾರ್ ಅಣೆಕಟ್ಟು ವಿವಾದ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಹೊತ್ತಿ ಉರಿಯುವಂತೆ ಮಾಡಿದೆ. ಎರಡೂ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ಅನ್ಯ ರಾಜ್ಯಗಳಲ್ಲಿ ಬೇರು ಬಿಟ್ಟಿದ್ದ ಅನೇಕ ಜನರು ತಮ್ಮ ತವರಿಗೆ ಮರಳುತ್ತಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯ 168 ಜನರು ತಮಿಳುನಾಡಿಗೆ ಮರಳಲು ಪ್ರಾರಂಭಿಸಿದ್ದಾರೆ. ಇವರಲ್ಲಿ 80ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿದ್ದು, ಉಡುಂಬಂಚೋಲ, ಪರಥೋಡು, ಕೋಚಂಪರೈ, ಚೆಮ್ಮನ್ನಾರ್ ಮತ್ತು ತಲೈಯಂಕವಲ್ ಪ್ರದೇಶದಲ್ಲಿ ನೆಲೆಸಿದ್ದರು. ಈಗ ತಮಿಳುನಾಡಿನೆಡೆ ಹೆಜ್ಜೆ ಹಾಕಿದ್ದಾರೆ.

ಅಣೆಕಟ್ಟಿನ ಎತ್ತರಕ್ಕೆ ಸಂಬಂಧಿಸಿದಂತೆ ವಿವಾದ ಉದ್ಭವವಾಗಿದೆ. ಪ್ರಸ್ತುತ 136 ಅಡಿ ಎತ್ತರವಿರುವ ಅಣೆಕಟ್ಟನ್ನು 142 ಅಡಿಗೆ ಎತ್ತರಿಸಬೇಕೆಂದು ತಮಿಳುನಾಡು ಜಯಲಲಿತಾ ಸಂಪುಟ ತೀರ್ಮಾನಿಸಿದೆ. ಕೇರಳ ಇದನ್ನು ವಿರೋಧಿಸುತ್ತಿದ್ದು, 136 ಅಡಿಯಿಂದ 120ಕ್ಕೆ ಇಳಿಸಬೇಕೆಂಬ ಕ್ಯಾತೆ ತೆಗೆದಿದೆ. ಈ ಕುರಿತು ಸುಪ್ರೀಂ ಕೋರ್ಟಿಗೆ ಕೇರಳ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದೆ.

ಸುಪ್ರೀಂ ಕೋರ್ಟಿನಲ್ಲಿ ಕೇರಳದ ಅರ್ಜಿ ತಿರಸ್ಕೃತವಾಗುತ್ತಿದ್ದಂತೆ ಅಲ್ಲಿರುವ ತಮಿಳುನಾಡಿನ ಜನರ ಮೇಲೆ ಕೇರಳಿಗರು ಹಲ್ಲೆ ಮಾಡಿ, ಮನೆಗಳ ಮೇಲೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ಇದರಿಂದ ಬೆದರಿದ ತಮಿಳರು ಕೇರಳದಿಂದ ಗುಳೆ ಕೀಳುತ್ತಿದ್ದಾರೆ. ಈವರೆಗೆ ಸುಮಾರು 2 ಸಾವಿರ ಜನ ಕೇರಳದಿಂದ ಜಾಗ ಖಾಲಿ ಮಾಡಿ ತಮಿಳುನಾಡು ಸೇರಿಕೊಂಡಿದ್ದಾರೆ. ತಮಿಳುನಾಡಿನಲ್ಲಿಯೂ ಕೇರಳಿಗರ ಮೇಲೆ ಹಲ್ಲೆಗಳಾಗಿರುವ ವರದಿಗಳು ಬಂದಿದ್ದು, ಹಲವರು ತಮ್ಮ ತವರಿಗೆ ಮರಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+