ಬೆಳಗಾವಿ ಮೇಯರ್ ಮಂದಾಗೆ ಎಂಇಎಸ್ ಗೇಟ್‌ಪಾಸ್
ಬೆಳಗಾವಿ,
ಡಿ. 15 : ಅಧಿಕಾರ ಉಳಿಸಿಕೊಳ್ಳುವ ಧಾವಂತದಲ್ಲಿ ಮರಾಠಿಗರನ್ನು ಕಡೆಗಣಿಸಿದ್ದಾರೆಂಬ ಆರೋಪದ ಮೇಲೆ ಬೆಳಗಾವಿ ಮೇಯರ್ ಮಂದಾ ಬಾಳೆಕುಂದ್ರಿ ಮತ್ತು ಉಪ ಮೇಯರ್ ರೇಣು ಕಿಲ್ಲೇಕರ್ ಅವರನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಉಚ್ಛಾಟನೆ ಮಾಡಿದೆ. id="toptextpromo">ಕನ್ನಡ
ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ್ದಕ್ಕಾಗಿ ಎಂಇಎಸ್ ಆಡಳಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಏಕೆ ಮಾಡಬಾರದೆಂದು ಸರಕಾರ ನೋಟೀಸ್ ನೀಡಿತ್ತು. ಕೆಲ ದಿನಗಳ ಮೌನದ ನಂತರ ಉತ್ತರಿಸಿದ್ದ ಮಂದಾ, ಸೂಪರ್ ಸೀಡ್ ಮಾಡಬಾರದು, ಸೌಹಾರ್ದಯುತವಾಗಿ ಆಡಳಿತ ನೀಡಲು ಅವಕಾಶ ನೀಡಬೇಕು ಎಂದು ಬೇಡಿಕೊಂಡಿದ್ದರು. id='are-slot-1' class='oiad oi-axt oiadv'> id='top-searched-articles'>ಕನ್ನಡಿಗರ
ಮುಂದೆ ಮೊಣಕಾಲು ಊರಿದ್ದಾರೆಂದು ಮಂದಾ ಬಾಳೆಕುಂದ್ರಿ ವಿರುದ್ಧ ಕಠಿಣ ಕ್ರಮಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಂದಾಗಿದೆ. ಮರಾಠಿಗರ ಹಿತಾಸಕ್ತಿಯನ್ನು ಮರೆತು ಕನ್ನಡಿಗರ ಓಲೈಕೆಗೆ ಮಂದಾ ಮುಂದಾಗಿದ್ದಾರೆಂದು ಎಂಇಎಸ್ ಜಿಲ್ಲಾಧ್ಯಕ್ಷ ಸಿಕೆ ಪಾಟೀಲ್ ಕೆಂಡ ಕಾರಿದ್ದಾರೆ.











Click it and Unblock the Notifications