ನೀವೇ ಮುಂದಿನ ಸಿಎಂ, ಯಡಿಗೆ ಗಡ್ಕರಿ ವಚನಾಮೃತ

ಶ್ರೀರಾಮುಲು ಗೆಲ್ಲಿಸಿದ ನಂತರ ಕಿಂಗ್ ಮೇಕರ್ ಪಟ್ಟ ಪಡೆದ ಎಚ್ ಡಿ ಕುಮಾರಸ್ವಾಮಿ ಮತ್ತೆ ಚುನಾವಣೆ ಸ್ಪರ್ಧಿಸುವ ಮಾತಾಡಿದ್ದಾರೆ. ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರದಿ. ತಮ್ಮ ಬೆಂಬಲಿಗರ ಸಹಿ ಸಂಗ್ರಹಿಸಿ(ಸುಮಾರು 70 ಶಾಸಕರು) ಹೈಕಮಾಂಡ್ ಮುಂದಿಟ್ಟಿರುವ ಯಡಿಯೂರಪ್ಪ ಆಗಲೇ ಗೆಲುವಿನ ನಗೆ ಬೀರಿದ್ದಾರೆ.
ಯಡಿಯೂರಪ್ಪ ಮುಂದಿರುವ ಸವಾಲು: ಇನ್ನೆರಡು ವಾರಗಳಲ್ಲಿ ಕೋರ್ಟ್ ಕೇಸ್ ಗಳನ್ನು ಮುಗಿಸಿಕೊಳ್ಳವುದು. ಸದಾನಂದ ಗೌಡರನ್ನು ಎಂಎಲ್ ಸಿಯಾಗಿ ಮಾಡುವುದು. ನಂತರ ಮುಖ್ಯಮಂತ್ರಿ ಪಟ್ಟವನ್ನು ಪುನಃ ಪಡೆಯುವುದು.
ಕೇಂದ್ರದಲ್ಲಿ ಆರೋಪ ಹೊತ್ತಿರುವ ಎಸ್ ಎಂ ಕೃಷ್ಣ, ದೆಹಲಿಯಲ್ಲಿ ಶೀಲಾ ದೀಕ್ಷಿತ್, ತಮಿಳುನಾಡಿನಲ್ಲಿ ಜಯಲಲಿತಾ ಅಧಿಕಾರದಲ್ಲಿರುವಾಗ ನಾನು ಮಾತ್ರ ಏಕೆ ಆರೋಪ ಹೊತ್ತುಕೊಂಡ ಮಾತ್ರಕ್ಕೆ ಅಧಿಕಾರದಿಂದ ವಂಚಿತನಾಗಬೇಕು ಎಂದು ಗಡ್ಕರಿ ಟೀಂ ಮೇಲೆ ಯಡಿಯೂರಪ್ಪ ಪ್ರಶ್ನೆಗ ಸುರಿಮಳೆ ಗೈದಿದ್ದಾರೆ.
ಯಡಿಯೂರಪ್ಪ ತಮ್ಮ ಆಪ್ತ ಶಾಸಕ ಲೆಹರ್ ಸಿಂಗ್ ಅವರನ್ನು ಕರೆದುಕೊಂಡು ದೆಹಲಿಗೆ ಹೋಗಿರುವುದು ಅನೇಕ ಗುಮಾನಿಗೆ ಕಾರಣವಾಗಿದೆ. ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಗಡ್ಕರಿ ಅವರು ಸ್ವಲ್ಪ ದಿನ ಕಾಯುವಂತೆ ಹೇಳಿದ್ದಾರೆ.
ಮೇಲ್ಮನೆ ಚುನಾವಣೆಯಲ್ಲಿ ಸದಾನಂದ ಗೌಡ ಸೋತರೆ ಏನಾಗುತ್ತದೆ? ...












Click it and Unblock the Notifications