ಗಣಿ ವರದಿ, ಸುಪ್ರೀಂಕೋರ್ಟ್ ಮೇಲೆ ಭಾರ ಹಾಕಿದ ಹೆಗ್ಡೆ

Justice Santosh Hegde
ಬೆಂಗಳೂರು, ಡಿ. 13: ಅಕ್ರಮ ಗಣಿಗಾರಿಕೆ ಕುರಿತ ವರದಿಯನ್ನು ಆಧಾರಿಸಿ ಪಕ್ಕದ ಆಂಧ್ರಪ್ರದೇಶ ಹಾಗೂ ಗೋವಾ ಸರ್ಕಾರಗಳು ಕಾನೂನು ಕ್ರಮ ಕೈಗೊಂಡಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ವರದಿಯನ್ನು ಮೂಲೆಗುಂಪು ಮಾಡಿದೆ ಎಂದು ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಜನ ಜಾಗೃತಿ ವೇದಿಕೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹೆಗ್ಡೆ, ಅಕ್ರಮ ಗಣಿಗಾರಿಕೆ ಕುರಿತು ನೀಡಿರುವ ವರದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮನ್ನಣೆ ದೊರೆಯಲಿದೆ ಎಂಬ ವಿಶ್ವಾದವಿದೆ.

ನಮ್ಮ ತಂಡ ಅತ್ಯಂತ ಪರಿಶ್ರಮದಿಂದ ವರದಿ ತಯಾರಿಸಿದ್ದೇವೆ. ಆದರೆ, ಸರ್ಕಾರ ವರದಿಯನ್ನು ನಿಷ್ಕ್ರೀಯಗೊಳಿಸಿ, ವರದಿಯ ಸತ್ಯಾಸತ್ಯತೆ ಬಗ್ಗೆ ಚರ್ಚಿಸುತ್ತಿರುವುದು ವಿಷಾದದ ಸಂಗತಿ ಎಂದು ಸಂತೋಷ್ ಹೆಗ್ಡೆ ಹೇಳಿದರು.

ಗಣಿವರದಿಯಲ್ಲಿ ನಿಜಾಂಶಗಳನ್ನು ಹೊರಬಿದ್ದ ನಂತರ, ರಾಜಕಾರಣಿಗಳು ನನ್ನನ್ನು ಒಳಗೊಂಡಂತೆ ಲೋಕಾಯುಕ್ತ ಸಂಸ್ಥೆಯನ್ನೂ ದ್ವೇಷಿಸಲು ಪ್ರಾರಂಭಿಸಿದರು ಎಂದು ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ಇಚ್ಚಾಶಕ್ತಿ ಕೊರತೆ: ಪ್ರಬಲ ಜನ ಲೋಕಪಾಲ್ ಮಸೂದೆ ಜಾರಿಗೆ ಕೇಂದ್ರ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಸಂಸತ್‌ನಲ್ಲಿ ಮಸೂದೆ ಜಾರಿಗೆ ವಿರೋಧ ವ್ಯಕ್ತವಾಗುತ್ತಿರುವುದು ಸರಿಯಾದ ಕ್ರಮವಲ್ಲ. ಕೇಂದ್ರ ಸರಕಾರ ಈ ಕುರಿತು ಸಂಸತ್‌ನಲ್ಲಿ ಚರ್ಚಿಸದೇ ಜಾರಿಗೊಳಿಸುವಂತಾಗಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+