ರಾಧಾಕೃಷ್ಣನಿಗೆ ಕೈಮುಗಿದು ನಾಮಪತ್ರ ಸಲ್ಲಿಸಿದ ಸದಾನಂದ
ಬೆಂಗಳೂರು,
ಡಿ.12: ಮೇಲ್ಮನೆಯ ಏಕಮಾತ್ರ ಸ್ಥಾನಕ್ಕಾಗಿ ಬಿಜೆಪಿ ಅಭ್ಯರ್ಥಿ, ಮುಖ್ಯಮಂತ್ರಿ ಸದಾನಂದ ಗೌಡ ಅವರು ಅವಿರೋಧ ಆಯ್ಕೆ ಬಯಸಿ, ಇಂದು ಬೆಳಗ್ಗೆ 10.45ಕ್ಕೆ ನಾಮಪತ್ರ ಸಲ್ಲಿಸಿದರು. ಆದರೆ ಅವರಿಗೆ ತೀವ್ರ ಸ್ಪರ್ಧೆ ನೀಡಲು ಕಾಂಗ್ರೆಸ್ ಪಕ್ಷವು ಜೆಡಿಎಸ್ ಮತ್ತು ಪಕ್ಷೇತರರ (ಶ್ರೀರಾಮುಲು ಸೇರಿದಂತೆ) ಬೆಂಬಲಯಾಚಿಸಿದ್ದು, ಆನಂದ್ ಗಡ್ಡದೇವರ ಮಠ ಅವರನ್ನು ಪ್ರತಿಪಕ್ಷದ ಅಭ್ಯರ್ಥಿಯನ್ನಾಗಿ ಕಣ್ಣಕ್ಕಿಳಿಸುವ ಉಮೇದಿ ಹೊಂದಿದೆ. id="toptextpromo">ಡಿ.
22ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಬೆಂಬಲಿತ ಶಾಸಕರೊಂದಿಗೆ ಸದಾನಂದ ಗೌಡ ಅವರು ವಿಧಾನಸೌಧಕ್ಕೆ ಬೆಳಗ್ಗೆ 10.30ಕ್ಕೆ ಆಗಮಿಸಿದರು. ಅಲ್ಲಿ ಸಚಿವಾಲಯದ ಕಾರ್ಯದರ್ಶಿ ಪಿ. ಓಂಪ್ರಕಾಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ಅವರು ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಅನೇಕ ಶಾಸಕರು ಸದಾನಂದ ಗೌಡರಿಗೆ ಸಾಥ್ ನೀಡಿದರು.











Click it and Unblock the Notifications