ಲವ್ ಜಿಹಾದ್ ಶಂಕೆ ಮಗಳಿಗೆ ಠಾಣೆಯಲ್ಲೇ ಇರಿದ ತಂದೆ

ಚಿಕ್ಕಮಗಳೂರು, ಡಿ.12: ಅನ್ಯಕೋಮಿಗೆ ಸೇರಿರುವ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳನ್ನು ಬೆದರಿಸಿದ ತಂದೆಯೊಬ್ಬ, ಪೊಲೀಸ್ ಠಾಣೆಯಲ್ಲೇ ಮಗಳ ಕುತ್ತಿಗೆ ಕುಯ್ದ ಪ್ರಸಂಗ ನಡೆದಿದೆ.

ಪುತ್ತೂರು ಮೂಲದ ಮಮತಾ ಹಾಗೂ ಮಹಮ್ಮದ್ ನೂರು ಪರಸ್ಪರ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಇದಕ್ಕೆ ಮಮತಾಳ ತಂದೆ ರಾಮಚಂದ್ರ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು.

ಈ ಲವ್ ಪ್ರಕರಣಕ್ಕೆ ಲವ್ ಜಿಹಾದ್ ಎಂಬ ಲೇಪ ಹಚ್ಚಿ ಅನೇಕ ಪುಕಾರುಗಳು ಹರಡತೊಡಗಿತ್ತು. ಇದರಿಂದ ಮುಕ್ತಿ ಹೊಂದಲು ಮಮತಾ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಳು.

ನನಗಎ 23 ವರ್ಷ ಹಾಗೂ ಮಹಮ್ಮದ್ ಗೆ 27 ವರ್ಷ ವಯಸ್ಸಾಗಿದೆ. ಇಬ್ಬರೂ ಮೇಜರ್, ಮದುವೆಯಾಗಲು ಬಯಸಿದ್ದೇವೆ. ನಮ್ಮ ಮನೆ ಕಡೆ ವಿರೋಧವಿದೆ. ಮೂಲಭೂತವಾದಿಗಳ ಬೆದರಿಕೆ ಕೂಡಾ ಇದೆ. ದಯವಿಟ್ಟು ಸಹಾಯ ಮಾಡಿ ಎಂದು ಮಮತ ಮನವಿ ಸಲ್ಲಿಸಿದ್ದಳು.

ಪ್ರಕರಣವನ್ನು ಸಂಧಾನ ಮಾತುಕತೆ ಮೂಲಕ ಇತ್ಯರ್ಥಗೊಳಿಸಲು ಯೋಜಿಸಿದ ಎಸ್ ಐ ನಾಗರಾಜ್ ಅವರು ಎರಡು ಕಡೆ ಜನಗಳಿಗೆ ಠಾಣೆ ಬರುವಂತೆ ಸೂಚಿಸಿದ್ದರು. ಆದರೆ, ಸಂಧಾನ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆಯತೊಡಗಿತು. ಇದ್ದಕ್ಕಿದ್ದಂತೆ ರಾಮಚಂದ್ರ ಚಾಕು ತೆಗೆದು ಮಗಳ ಕುತ್ತಿಗೆ ಮೇಲೆ ದಾಳಿ ಮಾಡಿದ. ಇದರಿಂದ ಗಾಬರಿಯಾಗಿ ಕೆಲ ಪೊಲೀಸರು ಚೆಲ್ಲಾಪಿಲ್ಲಿಯಾದರು.

ಎಸ್ ಐ ನಾಗರಾಜ ಅವರೇ ಸ್ವತಃ ಮಮತಾರನ್ನು ಆಸ್ಪತ್ರೆಗೆ ಸೇರಿದರು. ರಾಮಚಂದ್ರ ಕೂಡಾ ಘಟನೆಯಲ್ಲಿ ಕೈಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+