ಡಿ.17ರಂದು ಬೆಂಗಳೂರಿಗೆ ಬರಲಿದ್ದಾರೆ ಅಣ್ಣಾ ಹಜಾರೆ

Appoint lokayukta before Anna comes to Bangalore
ಬೆಂಗಳೂರು, ಡಿ. 12 : ಜನ ಲೋಕಪಾಲ ಮಸೂದೆಯ ಮಂಡನೆಗೆ ಯುಪಿಎ ಸರಕಾರ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಅಣ್ಣಾ ಹಜಾರೆ ಡಿ.17, ಶನಿವಾರ ಬೆಂಗಳೂರಿಗೆ ಬರುತ್ತಿದ್ದಾರೆ. ಮಧ್ಯಾಹ್ನ 1.30ಕ್ಕೆ ಫ್ರೀಡಂ ಪಾರ್ಕಿಗೆ ಬರಲಿರುವ ಅಣ್ಣಾ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಸಾರ್ವಜನಿಕ ಸಭೆ ಸಂಜೆ 5.30ರವರೆಗೆ ನಡೆಯಲಿದ್ದು, ಈ ಬಾರಿ ಕೂಡ ಸಾವಿರಾರು ಸಂಖ್ಯೆಯಲ್ಲಿ ಭ್ರಷ್ಟಾಚಾರ ವಿರೋಧಿ ನಾಗರಿಕರು ಫ್ರೀಡಂ ಪಾರ್ಕಿಗೆ ಬಂದು ಸೇರುವ ನಿರೀಕ್ಷೆಯಿದೆ. ಸಹಜವಾಗಿ ಮಹಾರಾಣಿ ಕಾಲೇಜು ಎದುರಿಗಿನ ರಸ್ತೆಯಲ್ಲಿ ರಸ್ತೆ ದಟ್ಟಣೆ ಅಧಿಕವಾದರೂ ಆಶ್ಚರ್ಯವಿಲ್ಲ.

ಕರ್ನಾಟಕದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಲು ಸರಕಾರ ತೋರುತ್ತಿರುವ ನಿಷ್ಕ್ರಿಯತೆ, ಜನ ಲೋಕಪಾಲ ಮಸೂದೆ ಮಂಡನೆಗಾಗಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸುತ್ತಿರುವ ಬೆಂಗಳೂರಿನ ಜನತೆಯನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದೆ.

ನವದೆಹಲಿಯಲ್ಲಿ ಅಣ್ಣಾ ಹಜಾರೆ ಭಾನುವಾರ ನಡೆಸಿದ ಒಂದು ದಿನದ ಸಾಂಕೇತಿಕ ನಿರಶನ ಬೆಂಬಲಿಸರು ಬೆಂಗಳೂರಿನಲ್ಲಿ ನಿನ್ನೆ ನೆರೆದಿದ್ದ 2,500 ಭ್ರಷ್ಟವಿರೋಧಿ ಜನರ ಒಕ್ಕೊರಲ ಕೂಗು ಅದೇ ಆಗಿತ್ತು. ಕರ್ನಾಟಕದಲ್ಲಿ ಆದಷ್ಟು ಬೇಗ ಲೋಕಾಯುಕ್ತರ ನೇಮಕವಾಗಬೇಕು, ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕೊನೆಹಾಡಬೇಕು.

ಜನರ ಈ ಕೂಗು ಇದೇ ಶನಿವಾರ, ಡಿ.17ರಂದು ಮತ್ತಷ್ಟು ಶಕ್ತಿತುಂಬಿಕೊಂಡು ಗರ್ಜಿಸಲಿದೆ. ಸ್ವತಃ ಅಣ್ಣಾ ಹಜಾರೆ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಬಂದು ಭ್ರಷ್ಟಾಚಾರ ತೊಲಗಿಸಲು ಜನರನ್ನು ಮತ್ತಷ್ಟು ಉತ್ತೇಜಿಸಲಿದ್ದಾರೆ. ಜೊತೆಗೆ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ, ಅರವಿಂದ ಕೇಜ್ರಿಲಾವ್, ಕಿರಣ್ ಬೇಡಿ ಮುಂತಾದವರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅದೇ ದಿನ ಮೈಸೂರು, ಗುಲಬರ್ಗ, ಧಾರವಾಡ ಮತ್ತಿತರ ಜಿಲ್ಲೆಗಳಲ್ಲಿಯೂ ಜನ ಲೋಕಪಾಲ ಮಸೂದೆ ಮಂಡನೆಯನ್ನು ಆಗ್ರಹಿಸಿ ಸಾರ್ವಜನಿಕ ಸಭೆಗಳು ಆಗಲಿವೆ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಚಿಂತಿಸಿ, ಸರ್ವಸಮ್ಮತ ಮತ್ತು ನಿಷ್ಕಳಂಕ ವ್ಯಕ್ತಿಯನ್ನು ಲೋಕಾಯುಕ್ತ ಪೀಠಕ್ಕೆ ನೇಮಕ ಮಾಡಲಿ ಎಂಬುದು ಜನರ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+