ಬಿಜೆಪಿಗೆ ಟಾಂಗ್ ಕೊಟ್ಟು ತಮಾಷೆನೋಡುವ ರಾಮುಲು

ಆದರೆ ಇದು ಬಿಜೆಪಿಗೆ ಟಾಂಗ್ ಕೊಟ್ಟು ಸುಮ್ಮನಾಗುವ ರಾಜಕೀಯ ಲೆಕ್ಕಾಚಾರವಾಗಿದೆ. ವಾಸ್ತವವಾಗಿ ಸಂಸದ ಸದಾನಂದಗೌಡರ ಆಯ್ಕೆಗಾಗಿಯೇ ಮೇಲ್ಮನೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸದಾನಂದರನ್ನು ಸೋಲಿಸುವ ಗುರಿಯೊಂದಿಗೆ ರಾಮುಲು ಅವರ ರೋಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರತಿಪಕ್ಷಗಳೂ ಅವರೊಂದಿಗೆ ಕೈಜೋಡಿಸಿವೆ.
ಗಮನಾರ್ಹವೆಂದರೆ ಸದಾನಂದ ಗೌಡರು ಸೋತರೆ ಅದು ಪಕ್ಷಕ್ಕೆ ಮುಖಭಂಗವಾಗಲಿದೆಯೇ ಹೊರತು ಸರಕಾರದ ಅಸ್ತಿತ್ವಕ್ಕೇನೂ ಧಕ್ಕೆಯೊದಗದು. ಹಾಗೆಂದೇ ನಿಮಿತ್ತ ಮಾತ್ರಕ್ಕೆ ಸದಾನಂದರನ್ನು ಸೋಲಿಸಿ, ತನ್ನ ಶಕ್ತಿ ಪ್ರದರ್ಶಿಸುವುದು ಪ್ರತಿಪಕ್ಷಗಳ ಮಂತ್ರಾಲೋಚನೆಯಾಗಿದೆ.
ಉಲ್ಲೇಖಾರ್ಹ ಅಂಶವೆಂದರೆ 22-25 ಶಾಸಕರೊಂದಿಗೆ ಸರಕಾರ ಉರುಳಿಸುವ ಸಾಹಸಕ್ಕೆ ರಾಮುಲು ಕೈಹಾಕಿದರೆ ಅದು ಅವರಿಗೇ ಮುಳುವಾಗಲಿದೆ. ಸರಕಾರ ಉರುಳಿ ಮಧ್ಯಂತರ ಚುನಾವಣೆ ಏರ್ಪಟ್ಟರೆ ಬಿಜೆಪಿಗೆ ಪಾಲಿಗೆ ಅನುಕಂಪದ ಹವಾ ಕೆಲಸ ಮಾಡಲಿದೆ. ಆದ್ದರಿಂದ ಸದ್ಯಕ್ಕೆ ಯಾವುದೇ ಪಕ್ಷವೂ ಚುನಾವಣೆಗೆ ಹೋಗುವ ಮನಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಬಿಜೆಪಿಗೆ ಟಾಂಗ್ ಕೊಟ್ಟು ಸುಮ್ಮನಾಗುವ ಲೆಕ್ಕಾಚಾರ ಇದಾಗಿದೆ.












Click it and Unblock the Notifications