ಕಡುವೈರಿ ಕೃಷ್ಣ ಬೆಂಬಲಕ್ಕೆ ನಿಂತ ದೇವೇಗೌಡ

S M Krishna & Deve Gowda
ನವದೆಹಲಿ, ಡಿ 10: ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ ಮಿತ್ರರೂ ಅಲ್ಲ ಎನ್ನುವ ಮಾತಿಗೆ ಇನ್ನೊಂದು ಉದಾಹರಣೆ ಓದಿರಿ.

" ನವದೆಹಲಿಯಲ್ಲಿ ಕುಳಿತು ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಸಾಕ್ಷ್ಯಗಳನ್ನು ತಿರುಚಲು ಸಾಧ್ಯವಿಲ್ಲ. ಹೀಗಾಗಿ ಅವರು ಪದತ್ಯಾಗ ಮಾಡಬೇಕಾದ ಅವಶ್ಯಕತೆ ಇಲ್ಲ" ಎಂದು ಹೇಳಿಕೆ ನೀಡುವುದರ ಮೂಲಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಗಣಿ ಹಗರಣದ ಆರೋಪಿ ಕೃಷ್ಣ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಕೃಷ್ಣ ಅವರ ವಿರುದ್ದ ಎಫ್ ಐ ಆರ್ ದಾಖಲಿಸಿರುವ ಹಿನ್ನಲೆಯಲ್ಲಿ ಅವರು ರಾಜೀನಾಮೆ ನೀಡಬೇಕಾದ ಪ್ರಮೇಯ ಉಧ್ಭವವಾಗುವುದಿಲ್ಲ. ನಾನಾಗಲಿ ನನ್ನ ಪಕ್ಷವಾಗಲಿ ಅವರ ರಾಜೀನಾಮೆಗೆ ಒತ್ತಾಯಿಸುವುದಿಲ್ಲ ಎಂದು ಕೃಷ್ಣ ಅವರ ರಾಜಕೀಯ ಕಡುವೈರಿ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಇಬ್ಬರೂ ಹಿರಿಯ ಈ ನಾಯಕರುಗಳು ರಾಜಕೀಯವಾಗಿ ವೈರಿಗಳೆಂದು ಗುರುತಿಸಿಕೊಂಡಿರುವ ಹಿನ್ನಲೆಯಲ್ಲಿ ಗೌಡರ ಈ ಹೇಳಿಕೆ ಭಾರೀ ಮಹತ್ವ ಪಡೆದಿದೆ. ಲೋಕಸಭೆಯಲ್ಲಿ ಅನಂತ್ ಕುಮಾರ್ ನೇತ್ರತ್ವದಲ್ಲಿ ಬಿಜೆಪಿ ಸದಸ್ಯರು " ಶ್ರೀಕೃಷ್ಣ ಬೆಣ್ಣೆ ತಿನ್ನುತ್ತಿದ್ದ, ಆದರೆ ಈ ಕೃಷ್ಣ ಖನಿಜ ತಿನ್ನುತ್ತಿದ್ದಾರೆಂದು" ಲೇವಡಿ ಮಾಡಿದ್ದನ್ನು ಮತ್ತು ದೇವೇಗೌಡರ ಪುತ್ರ ಕುಮಾರಸ್ವಾಮಿ ಕೂಡ ಗಣಿ ಗುಳಿಯಲ್ಲಿ ಸಿಲುಕಿರುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+