ತಿರುಪತಿ ತಿರುಮಲ ಒಂದು ಕ್ಲಬ್ಬು- ಧರ್ಮಗುರು

ಸಹಸ್ರ ತುಳಸಿ ಶ್ರೀನಿವಾಸಂ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಿದ್ದ ಅವರು ಪ್ರಾಚೀನ ರೋಮನ್ ಸಂಸ್ಕ್ರತಿಯ ಉದಾಹರಣೆ ಕೊಟ್ಟು, ತಿರುಮಲಕ್ಕೆ ಹೋಗುವುದು ಕ್ಲಬ್ ಗೆ ಹೋಗುವಂತೆ ಎಂದಿದ್ದಾರೆ.
ಕ್ಯಾಥೊಲಿಕ್ ಸಂಸ್ಕ್ರತಿಯನ್ನು ಹೊಗಳಿ, ಹಿಂದೂ ದೇವಸ್ಥಾನಗಳ ಈಗಿನ ಪರಿಸ್ಥಿತಿಗೆ ಖಾರವಾಗಿ ಪ್ರತಿಕ್ರಯಿಸುತ್ತಾ, ಚರ್ಚ್, ಭಕ್ತರಿಗೆ ನೀಡಿದರೆ ದೇವಸ್ತಾನಗಳು ಭಕ್ತರಿಂದ ಕಿತ್ತುಕೊಳ್ಳುತ್ತವೆ ಎಂದೂ ಒತ್ತಿ ಹೇಳಿದ್ದಾರೆ.
ಧಾರ್ಮಿಕ ಸ್ಥಳವನ್ನು ದೇವಸ್ಥಾನದ ಆಡಳಿತ ಮಂಡಳಿ ತಮ್ಮ ಆಡಂಬರದ ಪ್ರದರ್ಶನಕ್ಕೆ ಬಳಸಿಕೊಳ್ಳುತ್ತಿವೆ ಎಂದಿದ್ದಾರೆ. ತಿರುಮಲದಲ್ಲಿ ಭಕ್ತಾದಿಗಳ ಸೌಕರ್ಯದ ಬಗ್ಗೆ ಮಾತನಾಡುತ್ತಾ, ಬೆಟ್ಟದಲ್ಲಿರುವ ಎಲ್ಲವೂ ದೇವರಿಗೆ ಸೇರಿದ್ದು, ಜನರ ಸೌಕರ್ಯ ಆನಂತರದ ವಿಷಯ ಎಂದಿದ್ದಾರೆ.
ಜನರಿಗೆ ಹೆಚ್ಚು ಸ್ಥಳಾವಕಾಶ ಒದಗಿಸಲು ಮತ್ತು ಇನ್ನಿತರ ಕಾರ್ಯಕ್ರಮ ಹಮ್ಮಿಕೊಳ್ಳಲು ತಿರುಪತಿಯ ಐತಿಹಾಸಿಕ ವೇಯಿಕಾಲ ಮಂಟಪವನ್ನು ನಿರ್ಣಾಮ ಮಾಡಿದ ಆಡಳಿತ ಮಂಡಳಿಯ ನಿರ್ಧಾರವನ್ನು ಧಿಕ್ಕರಿಸಿ ಈ ಮಾತಾಡಿದ್ದಾರೆ.
ಮಂಟಪದ ನಿರ್ಣಾಮದ ಸಮಯದಲ್ಲಿಯೂ ಚಿನ್ನಜೀಯರ್ ಸ್ವಾಮೀಜಿ ಭಕ್ತಾದಿಗಳ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡುವ ಸಂಭವವನ್ನು ಟಿಟಿಡಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಯಿಸಿರುವ ಆಡಳಿತ ಮಂಡಳಿ, ಸ್ವಾಮಿಯವರು ಹೇಳಿರುವುದರಲ್ಲಿ ನಿಜಾಂಶವಿದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ಈ ಪ್ರಜಾಪ್ರಭುತ್ವ ರಾಜ್ಯದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ ಎಂದಷ್ಟೇ ಉತ್ತರಿಸಿದ್ದಾರೆ.












Click it and Unblock the Notifications