ಸಿಲಿಂಡರ್ ಸ್ಫೋಟ : ರೇಣು ಸಹೋದರ ಸ್ಥಿತಿ ಗಂಭೀರ
ಶಿವಮೊಗ್ಗ,
ಡಿ. 10 : ಸ್ನಾನದ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಕಾರಣ ಹೊನ್ನಾಳಿ ಶಾಸಕ ಅಬಕಾರಿ ಸಚಿವ ಎಂ ರೇಣುಕಾಚಾರ್ಯ ಅವರ ಸಹೋದರ ಆರಾಧ್ಯ ಅವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗದಲ್ಲಿ ಶನಿವಾರ ಬೆಳಿಗ್ಗೆ ಜರುಗಿದೆ. id="toptextpromo">ಬಾಪೂಜಿ
ಆಯುರ್ವೇದಿಕ್ ಕಾಲೇಜಿನ ಮುಖ್ಯಸ್ಥರಾಗಿರುವ ಆರಾಧ್ಯ ಅವರ ಸ್ಥಿತಿ ಗಂಭೀರವಾಗಿದೆ. ಅವರ ಜೊತೆ ಮೌನೇಶ್ ಎಂಬ ಆಸ್ಪತ್ರೆಯ ಸಿಬ್ಬಂದಿಗೂ ಗಂಭೀರವಾದ ಗಾಯಗಳಾಗಿವೆ. ಅವರಿಬ್ಬರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕಾಲೇಜು
ಹಾಸ್ಟೆಲ್ ಹಿಂಭಾಗದಲ್ಲಿರುವ ಅವರ ಗೃಹದಲ್ಲಿ ಈ ಘಟನೆ ನಡೆದಿದ್ದು, ಇಬ್ಬರಿಗೂ ಶೇ.70ರಷ್ಟು ಸುಟ್ಟ ಗಾಯಗಳಾಗಿವೆ. ಗ್ಯಾಸ್ ಗೀಸರ್ ರಿಪೇರಿ ಮಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ಇಬ್ಬರಲ್ಲಿ ಆರಾಧ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೆ ಸ್ಥಳಕ್ಕೆ ರೇಣುಕಾಚಾರ್ಯ ಧಾವಿಸಿದ್ದಾರೆ.











Click it and Unblock the Notifications