'ಮುಂಗಾರು ಮಳೆ' ಕೃಷ್ಣಪ್ಪ ವಿರುದ್ಧವೂ ಬಿತ್ತು ಭೂ ಕೇಸು

ಯಲಹಂಕದ ಬಳಿಯ ದಾಸನಪುರ ಹೋಬಳಿಯ ದೊಂಬರಹಳ್ಳಿಯಲ್ಲಿನ 5.36 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಭೂಮಾಲೀಕರಾದ ವೆಂಕಟಾಚಲಂ ಸೇರಿದಂತೆ 9 ಮಂದಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ.
ಭೂ ಸಾರವೇನು: 'ವಿವಾದಿತ ಸದರಿ ಜಮೀನಿಗೆ ಮುದ್ದುವೀರಪ್ಪ ಮೂಲ ಮಾಲೀಕರು. ಸುಂದರಂ ಎನ್ನುವವರನ್ನು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಮಾಡಿದ್ದ ಅವರು, ಈ ಜಮೀನನ್ನು ಅಭಿವೃದ್ಧಿ ಪಡಿಸಿ ನಿವೇಶನವನ್ನಾಗಿ ಮಾಡುವಂತೆ ತಿಳಿಸಿದ್ದರು. ಅದರಂತೆ ನಿವೇಶನ ತಯಾರಾದಾಗ, 1992ರಲ್ಲಿ ಸುಮಾರು 130 ಕುಟುಂಬಕ್ಕೆ ಅದನ್ನು ಹಂಚಿಕೆ ಮಾಡಲಾಯಿತು. ಅಲ್ಲಿ ಕೆಲವರು ಮನೆ ಕಟ್ಟಿಕೊಂಡು 10 ವರ್ಷದಿಂದ ವಾಸವಾಗಿದ್ದಾರೆ.
ಮುದ್ದುವೀರಪ್ಪ ತೀರಿಕೊಂಡ ಮೇಲೆ, ಅವರ ಪತ್ನಿ ಹಾಗೂ ಮಕ್ಕಳು ಈ ಜಮೀನನ್ನು ಮಾರಾಟ ಮಾಡಲು ತಯಾರಿ ನಡೆಸಿದರು. ಇದನ್ನು ಅಲ್ಲಿ ವಾಸವಾಗಿದ್ದವರು ಸಿವಿಲ್ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತು.
ಈ ಮಧ್ಯೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೃಷ್ಣಪ್ಪನವರು 2009ರಲ್ಲಿ ಒತ್ತಾಯ ಪೂರ್ವಕವಾಗಿ ಈ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈಗ ಮಾಲೀಕರನ್ನು ತೆರವುಗೊಳಿಸಲು ಅವರು ಪ್ರಯತ್ನಿಸಿದ್ದು, ಈ ಸಂಬಂಧ ಬೆದರಿಕೆ ಹಾಕುತ್ತಿದ್ದಾರೆ. ಕೋರ್ಟ್‌ನಿಂದ ಯಥಾಸ್ಥಿತಿಯ ಆದೇಶ ಇದ್ದರೂ ಕಾಂಪೌಂಡ್‌ಗಳನ್ನು ಅವರು ಕೆಡವಿದ್ದಾರೆ ಎಂದು ದೂರಲಾಗಿದೆ.












Click it and Unblock the Notifications