ಜೈಲಲ್ಲಿ ರೆಡ್ಡಿಯ ಆಶೀರ್ವಾದ ಪಡೆದ ಶ್ರೀರಾಮುಲು
ಹೈದರಾಬಾದ್,
ಡಿ. 8 : ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ವಿಧಾನಸಭೆಯಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ ಹೈದರಾಬಾದಿಗೆ ಧಾವಿಸಿದ ಬಿ. ಶ್ರೀರಾಮುಲು ಚಂಚಲಗುಡ ಕೇಂದ್ರ ಕಾರಾಗ್ರಹದಲ್ಲಿ ಬಂದಿಯಾಗಿರುವ ಜನಾರ್ದನ ರೆಡ್ಡಿಯನ್ನು ಗುರುವಾರ ಭೇಟಿಯಾದರು. id="toptextpromo">ಜೈಲಿನಿಂದ
ಹೊರಬಂದ ನಂತರ, ಹೊಸ ಪಕ್ಷ ಹುಟ್ಟುಹಾಕುತ್ತಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯವರ ಆಶೀರ್ವಾದವನ್ನು ಪಡೆಯಲು ಬಂದಿರುವುದಾಗಿ ಶ್ರೀರಾಮುಲು ಸುದ್ದಿಗಾರರಿಗೆ ತಿಳಿಸಿದರು. ಪಕ್ಷ ಆರಂಭಿಸಿದ ನಂತರ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಹಿಂದುಳಿದ ವರ್ಗದವರನ್ನೆಲ್ಲ ಒಗ್ಗೂಡಿಸಲು ಯತ್ನಿಸುವುದಾಗಿ ನುಡಿದರು. id='are-slot-1' class='oiad oi-axt oiadv'> id='top-searched-articles'>ಮಾಜಿ
ಸಚಿವ ಜನಾರ್ದನ ರೆಡ್ಡಿ ಯಾವುದೇ ಅಕ್ರಮ ಎಸಗಿರದಿದ್ದರೂ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ ಎಂದು ಶ್ರೀರಾಮುಲು ಖೇದ ವ್ಯಕ್ತಪಡಿಸಿದರು. ಶ್ರೀರಾಮುಲು ಜೊತೆ ಅವರ ತಂಗಿ ಬಳ್ಳಾರಿ ಸಂಸದೆ ಜೆ. ಶಾಂತಾ, ರಾಯಚೂರು ಸಂಸದ ಸಣ್ಣ ಫಕೀರಪ್ಪ ಮತ್ತು ಮಾಜಿ ಸಂಸದ ವಿರೂಪಾಕ್ಷಪ್ಪ ಮತ್ತಿತರರು ಹಾಜರಿದ್ದರು.











Click it and Unblock the Notifications