ಐಎಂ ಉಗ್ರರ ವಶಕ್ಕೆ ಬೆಂಗಳೂರು ಪೊಲೀಸ್ ಆಗ್ರಹ

Jyoti Prakash Mirji, Bangalore police commissioner
ಬೆಂಗಳೂರು, ಡಿ. 7 : ಏಪ್ರಿಲ್ 17, 2010ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಬಳಸಲಾದ ಸ್ಫೋಟಕಗಳನ್ನು ಉಡುಪಿಯಿಂದ ತಂದು ತುಮಕೂರಿನ ಮನೆಯೊಂದರಲ್ಲಿ ಶೇಖರಿಸಿಡಲಾಗಿತ್ತು ಮತ್ತು ಏ.16ರಂದೇ ಸ್ಟೇಡಿಯಂನಲ್ಲಿ ಬಾಂಬ್ ಫಿಕ್ಸ್ ಮಾಡಲಾಗಿತ್ತು.

ಈ ಸ್ಫೋಟಕ ಮಾಹಿತಿಗಳು ದೆಹಲಿಯಲ್ಲಿ ಬಂಧಿತರಾಗಿರುವ ಉಗ್ರರ ವಿಚಾರಣೆಯಿಂದ ಬಹಿರಂಗಗೊಂಡಿದೆ. ಉಗ್ರರು ತುಮಕೂರಿನ ಬಾಡಿಗೆ ಮನೆಯೊಂದರಲ್ಲಿ ತಂಗಿ ಸ್ಫೋಟಕಗಳನ್ನು ಶೇಖರಿಸಿಟ್ಟಿದ್ದರು ಮತ್ತು ಸತತವಾಗಿ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು.

ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ 12 ಮತ್ತು 18ರ ಬಳಿ ಸ್ಫೋಟಗಳು ಸಂಭವಿಸಿದ್ದವು. ಸ್ಫೋಟಕಗಳು ಕಡಿಮೆ ತೀವ್ರತೆಯವಾಗಿದ್ದರಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ಐಪಿಎಲ್ ನಲ್ಲಿ ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ಸೇರಿಸಿಕೊಳ್ಳದಿದ್ದಕ್ಕೆ ಪ್ರತೀಕಾರವಾಗಿ ಈ ಸ್ಫೋಟಕ್ಕೆ ಸಂಚು ಹೂಡಲಾಗಿತ್ತು.

ಉಗ್ರರ ತನಿಖೆಯ ಮಾಹಿತಿ ಪಡೆಯಲೆಂದು ದೆಹಲಿಗೆ ತೆರಳಿದ್ದ ಬೆಂಗಳೂರಿನ ಪೊಲೀಸರ ತಂಡ ಸಾಕಷ್ಟು ಮಾಹಿತಿಗಳನ್ನು ತೆಗೆದುಕೊಂಡು ಬಂದಿದೆ. ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಆ ಮಾಹಿತಿಯ ವಿವರಗಳನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ನೀಡಿದರು. ಬಂಧಿತರಾಗಿರುವ ಉಗ್ರರು ಇನ್ನೂ ಅನೇಕರ ಹೆಸರುಗಳನ್ನು ಹೇಳಿದ್ದು, ಅವರ ಬಂಧನಕ್ಕೆ ವ್ಯಾಪಕ ಜಾಲ ಬೀಸಲಾಗಿದೆ ಎಂದು ಮಿರ್ಜಿ ತಿಳಿಸಿದರು.

ಇಬ್ಬರ ವಶಕ್ಕೆ ಮನವಿ : ಬಂಧಿತ 6 ಉಗ್ರರಲ್ಲಿ ಬೆಂಗಳೂರು ಸ್ಟೇಡಿಯಂ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದ ಪ್ರಮುಖ ಉಗ್ರರಾದ ಮೊಹಮ್ಮದ್ ಕತೀಲ್ ಸಿದ್ದಿಕ್ ಮತ್ತು ಫಯೂರ್ ಅಹ್ಮದ್ ಜಮಾಲಿ ಎಂಬಿಬ್ಬರನ್ನು ಬೆಂಗಳೂರು ಪೊಲೀಸರ ವಶಕ್ಕೆ ನೀಡಬೇಕೆಂದು ದೆಹಲಿ ಪೊಲೀಸರನ್ನು ಕೋರಲಾಗಿದೆ. ಇಬ್ಬರೂ ಬಿಹಾರ ಮೂಲದವರು ಎಂದು ಮಿರ್ಜಿ ವಿವರ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+