ಸದ್ಯದಲ್ಲೇ ಶ್ರೀರಾಮುಲು- ಜೆಡಿಯು ನಾಯಕರ ಭೇಟಿ
ಬಳ್ಳಾರಿ,
ಡಿ.6: ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಅಭೂತಪೂರ್ವ ಯಶ ಸಾಧಿಸಿದ ಪಕ್ಷೇತರ ಅಭ್ಯರ್ಥಿ ಬಿ. ಶ್ರೀರಾಮುಲು ಹೊಸ ಪಕ್ಷ ಕಟ್ಟುವುದು ಖಚಿತವಾಗಿದ್ದು, ಸದ್ಯದಲ್ಲೇ ಜೆಡಿಯು ನಾಯಕರಾದ ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. id="toptextpromo">'ಹೊಸ
ಪಕ್ಷದ ಹೊಸ್ತಿಲಲ್ಲಿ ವಿಜಯೀ ಶ್ರೀರಾಮುಲು ಎಲ್ಲ ಸಾಧ್ಯತೆಗಳನ್ನೂ ಗಣನೆಗೆ ತೆಗೆದುಕೊಂಡಿದ್ದು, ಶೀಘ್ರವೇ ತಮ್ಮ ಪಕ್ಷದ ಇಬ್ಬರೂ ನಾಯಕರನ್ನು ಮುಖತಃ ಭೇಟಿಯಾಗಲಿದ್ದಾರೆ' ಎಂದು ಜೆಡಿಯು ರಾಷ್ಟ್ರಾಧ್ಯಕ್ಷ ಎಂ.ಪಿ. ನಾಡಗೌಡ ತಿಳಿಸಿದ್ದಾರೆ. ಈ ಕುರಿತು ಬಳ್ಳಾರಿ ಉಪ ಚುನಾವಣೆ ಸಂದರ್ಭದಲ್ಲಿ ರಾಮುಲು ಅವರನ್ನು ಭೇಟಿಯಾಗಿ ಚರ್ಚಿಸಿದ್ದಾಗಿ ನಾಡಗೌಡ ಹೇಳಿದರು. id='are-slot-1' class='oiad oi-axt oiadv'> id='top-searched-articles'>'ಮಾಜಿ
ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್. ಪಟೇಲ್ ಅವರ ಜತೆ ಗುರುತಿಸಿಕೊಂಡಿದ್ದ ಅನೇಕ ಹಿರಿಯ ನಾಯಕರು ಇಂದಿಗೂ ನಮ್ಮ ಸಂಪರ್ಕದಲ್ಲಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಶಾಸಕರೂ ನನ್ನನ್ನು ಸಂಪರ್ಕಿಸಿದ್ದಾರೆ. ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಅವರನ್ನು ಚಂಚಲಗೂಡ ಜೈಲಿನಲ್ಲಿ ಸಂಧಿಸುವೆ' ಎಂದು ನಾಡಗೌಡ ತಿಳಿಸಿದ್ದಾರೆ.











Click it and Unblock the Notifications