ಬಿಜೆಪಿಯಿಂದ ಶ್ರೀರಾಮುಲು ಬಂಟರ ಉಚ್ಛಾಟನೆ ಇಲ್ಲ

bjp-not-to-expell-sreeramulu-supporters
ಬಳ್ಳಾರಿ, ಡಿ.5: ಬಳ್ಳಾರಿ ಸಮರದಲ್ಲಿ ಸೋತು ಸುಣ್ಣವಾದ ಬಿಜೆಪಿ ಸದ್ಯಕ್ಕೆ ಯಾವುದೇ ಸಾಹಸಕ್ಕೆ ಕೈಹಾಕದಿರಲು ನಿರ್ಧರಿಸಿದೆ. ಮುಖ್ಯವಾಗಿ ಫಲಿತಾಂಶ ಉಪ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಮುಲು ಪಡೆಯನ್ನು ಪಕ್ಷದಿಂದ ಉಚ್ಛಾಟಿಸುವ ರಣೋತ್ಸಾಹದಲ್ಲಿತ್ತು. ಆದರೆ ಯಾವಾಗ ಫಲಿತಾಂಶ ವ್ಯತಿರಿಕ್ತವಾಗಿ ಬಂತೋ ತನಗೇ ತಾನೇ ಹಳ್ಳ ತೋಡಿಕೊಳ್ಳುವ ಅಪಾಯಕಾರಿ ಕ್ರಮಕ್ಕೆ ಮುಂದಾಗಿಲ್ಲ.

ರಾಮುಲು ದೊರೆತಿರುವ ಅಭೂತಪೂರ್ವ ಯಶಸ್ಸನ್ನು ನೋಡಿದರೆ ಅವರೊಬ್ಬ ಜನನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅನುಕಂಪವೋ, ಬಳ್ಳಾರಿಯ ವಾಸ್ತವವೋ ಅಂತೂ ರಾಮುಲು ಭರ್ಜರಿ ಯಶಸ್ಸು ಸಂಪಾದಿಸಿದ್ದಾರೆ. ರಾಮುಲು ಬಳಗದ ಶಾಸಕರು, ಸಂಸದರನ್ನು ಉಚ್ಛಾಟಿಸುವ ಕ್ರಮಕ್ಕೆ ಮುಂದಾದರೆ ಪಕ್ಷಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದನ್ನು ಬಿಜೆಪಿ ಈಗಾಗಲೇ ಮನಗಂಡಿದೆ.

ರಾಮುಲು ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗ ಅವರ ನಿಷ್ಠರನ್ನು ಉಚ್ಛಾಟಿಸಿದರೆ ಅವರೆಲ್ಲ ರಾಜೀನಾಮೆ ನೀಡಿ, ಮರು ಚುನಾವಣೆ ಜನಾದೇಶಕ್ಕೆ ಪಂಥಾಹ್ವಾನ ನೀಡುವುದು ಗ್ಯಾರಂಟಿ. ಅಂದರೆ ರಾಮುಲು ರಿಪೀಟ್ ಶೋ ಆಗುತ್ತದೆ. ಅಂದರೆ ರಾಮುಲು ಹಿಡಿತದಲ್ಲಿರುವ ಭಾಗಗಳಲ್ಲಿ ಪಕ್ಷ ನಿರ್ನಾಮವಾಗಲಿದೆ.

ಅಲ್ಲಿಗೆ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದು ಬೇಡ ಎಂಬುದು ಬಿಜೆಪಿ ಚಿಂತಕರ ಚಾವಡಿಯ ಚಿಂತನೆಯಾಗಿದೆ. ಅಷ್ಟಕ್ಕೂ ಪ್ರಸಕ್ತ ವಿಧಾನಸಭೆಯ ಕಾಲಾವಧಿ ಅಬ್ಬಬ್ಬಾ ಅಂದರೆ ಇನ್ನೊಂದು ವರ್ಷ. ಅಂತಹುದರಲ್ಲಿ ಮತ್ತೆ ಮತ್ತೆ ಚುನಾವಣೆ ಬೇಡ ಎಂಬ ಲೆಕ್ಕಾಚಾರವೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+