ಆಪರೇಷನ್ ಕಮಲ ಭೀತಿಯಲ್ಲಿ ರೆಸಾರ್ಟ್ ಸೇರಿದ ಜೆಡಿಎಸ್

ಸರ್ಕಾರದ ಅಸ್ಥಿರತೆಯನ್ನು ಸರಿಪಡಿಸಲು ಮುಂದಾಗಿರುವ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಮತ್ತೆ 'ಆಪರೇಷನ್ ಕಮಲ'ಕ್ಕೆ ಕೈ ಹಾಕಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ನಗರದ ಹೊರ ವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿ ಸೋಮವಾರ ಸಂಜೆ ನಂತರ ಜೆಡಿಎಸ್ ಶಾಸಕರ ಮಹತ್ವದ ಸಭೆ ನಡೆಯಲಿದೆ.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು, ಸಂಸದರು ಹಾಗೂ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಬಿಜೆಪಿ ವಿರುದ್ಧ ಜೆಡಿಎಸ್ ಕೈಗೊಳ್ಳಬೇಕಾದ ಕ್ರಮಗಳು, ಆಪರೇಷನ್ ಕಮಲದಿಂದ ಪಾರಾಗುವುದು ಹೇಗೆ, ಪಕ್ಷೇತರರು ಸಹಾಯ ಬಯಸಿದರೆ ಏನು ಮಾಡುವುದು? ಮುಂತಾದ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಭಾನುವಾರ(ಡಿ.4)ದಂದು ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆದಿತ್ತು. ಆದರೆ, ಇಂದಿನ ಸಭೆಯಲ್ಲಿ ಜೆಡಿಎಸ್ ನ ಮುಂದಿನ ನಡೆಯ ಬಗ್ಗೆ ಸಮಗ್ರ ಚರ್ಚೆ ನಡೆಯಲಿದ್ದು, ಮುಂದಿನ ಕಾರ್ಯತಂತ್ರ ಹಾಗೂ ಬಳ್ಳಾರಿ ರೆಡ್ಡಿ ಸೋದರರ ಜೊತೆಗಿನ ಮೈತ್ರಿ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.












Click it and Unblock the Notifications