ಶ್ರೀರಾಮುಲುಗೆ ಪರೋಕ್ಷವಾಗಿ ಜಯ ತಂದುಕೊಟ್ಟ ಯಡ್ಡಿ

BS Yeddyurappa indirectly helped Sriramulu
ಬಳ್ಳಾರಿ, ಡಿ.4:ಶ್ರೀರಾಮುಲು ಅವರ ಫ್ಯಾನ್ ಗಾಳಿ ಕೆಳಗೆ ಬಿಜೆಪಿ ತಣ್ಣನೆ ಮಲಗಿಕೊಂಡಿದ್ದು ಏಕೆ ಎಂಬ ನಿರೀಕ್ಷಿತ ಪ್ರಶ್ನೆಗೆ ಅನಿರೀಕ್ಷಿತ ಉತ್ತರ ಮತದಾರರಿಂದ ಸಿಕ್ಕಿದೆ. ಶ್ರೀರಾಮುಲು ಗೆಲುವಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪರೋಕ್ಷವಾಗಿ ಕಾರಣ ಎನ್ನಲಾಗಿದೆ.

ಬಿಜೆಪಿ ಪರ ಅಭ್ಯರ್ಥಿ ಗಾದಿ ಲಿಂಗಪ್ಪ ಅವರ ಪರ ಪ್ರಚಾರಕ್ಕೆ ಬರಲು ಮೀನಾಮೇಷ ಎಣಿಸುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಬಳ್ಳಾರಿಗೆ ಕಾಲಿಟ್ಟಿದ್ದೆ ತಡ ಬಿಜೆಪಿ ಗೆಲುವಿನ ಆಸೆ ಚಿಗುರೊಡೆದಿತ್ತು.

ಆದರೆ, ಆದದ್ದೇ ಬೇರೆ. ಪಕ್ಷದ ಶಿಸ್ತಿನ ಸಿಪಾಯಿ ಯಡಿಯೂರಪ್ಪ ಅವರು ಪ್ರಚಾರಕ್ಕೆ ಹೋದ ಕಡೆ ಎಲ್ಲಾ ಗಾಲಿ ಲಿಂಗಪ್ಪ ಅವರಿಗೆ ನೇರ ಮತ ಹಾಕಿ ಎಂದು ಹೇಳದೆ ತಮ್ಮ ಅಧಿಕಾರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯದ ಬಗ್ಗೆ ಸ್ವಯಂ ಪ್ರಶಂಸೆ ಮಾಡಿಕೊಳ್ಳತೊಡಗಿದರು.

"ಅಣ್ಣ ತಮ್ಮಂದಿರೇ ಅಕ್ಕ ತಂಗಿಯರೇ ನನ್ನ ತಾಯಂದಿರೇ ದಯವಿಟ್ಟು ಬಳ್ಳಾರಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ ನೀಡಿ" ಎಂದು ಹೇಳಿದ ಯಡಿಯೂರಪ್ಪ ಅವರ ಮಾತನ್ನು ನಂಬಿದ ಮತದಾರ ಯಡಿಯೂರಪ್ಪ ಅವರು ಹೇಳಿದಂತೆ ನಡೆದುಕೊಂಡರು.

ಯಡಿಯೂರಪ್ಪ ಅವರು ಸಿಎಂ ಆಗಿದ್ದ ಕಾಲದಲ್ಲಿ ರಿಪಬ್ಲಿಕ್ ಆಫ್ ಬಳ್ಳಾರಿ ನೋಡಿಕೊಂಡ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ಮಾಡಿರುವ ಅಲ್ಪಸ್ವಲ್ಪ ಅಭಿವೃದ್ಧಿಯನ್ನೇ ಮೆಚ್ಚಿ ಮತದಾರ ವೋಟ್ ಮಾಡಿದ್ದಾನೆ.

ಮತ ವಿಭಜನೆ ಮಾಡಲು ಹೋದ ಬಿಜೆಪಿ ತಕ್ಕ ಪಾಠ ಕಲಿತಿದೆ. ಕನ್ ಫ್ಯೂಸ್ ಆಗಿದ್ದ ಮತದಾರನಿಗೆ ಯಡಿಯೂರಪ್ಪ ಅವರ ಪ್ರಚಾರ ವೈಖರಿಯಿಂದ ಬಂದ ಜ್ಞಾನ ಶ್ರೀರಾಮುಲು ಫ್ಯಾನ್ ಕಡೆಗೆ ತಿರುಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+