ಚಂಚಲಗೂಡ ಜೈಲಿನಲ್ಲಿ ಮುಗುಳ್ನಕ್ಕ ಜನಾರ್ದನ ರೆಡ್ಡಿ

ಅಕ್ರಮ ಗಣಿಗಾರಿಕೆ ಸಂಬಂಧ ನಿನ್ನೆ (ಶನಿವಾರ) ಸಿಬಿಐ ಅಧಿಕಾರಿಗಳು ಕೋರ್ಟಿನಲ್ಲಿ ಆರೋಪಪಟ್ಟಿ ದಾಖಲಿಸಿದಾಗ ಒಂದಷ್ಟು ಕಳೆಗುಂದಿದ್ದ ಜನಾ ರೆಡ್ಡಿ ಇಂದು ಬಳ್ಳಾರಿಯಲ್ಲಿ ತಮ್ಮ ರಾಜಕೀಯ ಶಿಷ್ಯ ಶ್ರೀರಾಮುಲು ಗೆಲುವಿನ ನಗೆ ಬೀರುತ್ತಿರುವುದು ಸಾಕಷ್ಟು ಸಮಾಧಾನ ತಂದಿದೆ.
ಅಂತಿಮ ಮತ ಎಣಿಕೆ ವಿವರ:
ಶ್ರೀರಾಮುಲು (ಪಕ್ಷೇತರ) 74,527
ರಾಮಪ್ರಸಾದ್ (ಕಾಂಗ್ರೆಸ್) 27,737
ಗಾದಿ ಲಿಂಗಪ್ಪ (ಬಿಜೆಪಿ) 17,366
ಇನ್ನು, ಆಂಧ್ರದ ಜೈಲಿನಲ್ಲಿದ್ದುಕೊಂಡೇ ಕರ್ನಾಟಕದ ರಾಜಕೀಯದಲ್ಲಿ ಹೇಗೆ ಹಿಡಿತ ಸಾಧಿಸಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಾಗೆ ನೋಡಿದರೆ ರೆಡ್ಡಿ ಜೈಲಿನಲ್ಲಿರುವುದೇ ಶ್ರೀರಾಮುಲು ಪರ ಕೆಲಸ ಮಾಡಿದ್ದು, ಮತದಾರರು ರೆಡ್ಡಿ ಅನುಕಂಪದ ಅಲೆಯಲ್ಲಿ ಶ್ರೀರಾಮುಲುಗೆ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದಾರೆ.












Click it and Unblock the Notifications