'ಮುಖ್ಯಮಂತ್ರಿ ಕುಮಾರಸ್ವಾಮಿ' ವೆಂಕಟೇಶ್ವರನಿಂದ ಪಡೆದ ಗಣಿಕಪ್ಪ ಎಷ್ಟು ?

how-hdk-is-involved-in-illegal-mining
ಬೆಂಗಳೂರು, ಡಿ.4: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆಯ ದೂರನ್ನು ಮಾನ್ಯ ಶನಿವಾರ ಮಾಡಿರುವ ಲೋಕಾಯುಕ್ತ ಕೋರ್ಟ್‌ ನ್ಯಾಯಾಧೀಶ ಸುಧೀಂದ್ರ ರಾವ್‌ ಅವರು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣಗೆ ಆದೇಶಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಆರೋಪದಡಿ ಸಿಆರ್ ಪಿಸಿ ಸೆಕ್ಷನ್‌ 157(3) ಪ್ರಕಾರ ಲೋಕಾಯುಕ್ತ ಎಡಿಜಿಪಿ ಸತ್ಯಾನಾರಾಯಣ ಅವರಿಗೆ ತನಿಖೆಗೆ ಒಪ್ಪಿಸಲಾಗಿದೆ. ಆರೋಪಗಳ ಬಗ್ಗೆ ಲೋಕಾಯುಕ್ತ ಎಡಿಜಿಪಿ ತನಿಖೆ ನಡೆಸಿ ಜ. 6ರಂದು ವರದಿ ಸಲ್ಲಿಸಬೇಕು.

ಜತೆಗೆ ದೂರುದಾರರು ಪ್ರಕರಣ ಸಂಬಂಧ ಹೆಚ್ಚಿನ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಆದೇಶಿಸಿದರು. ಇದರಿಂದ, ಮುಂದಿನ ವಾರ ಮೂವರು ಮಾಜಿ ಸಿಎಂಗಳು ಮತ್ತು 11 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಲಿದೆ.

ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅಂದರೆ 2006ರಲ್ಲಿ ಬಳ್ಳಾರಿಯ ಸಂಡೂರು ತಾಲೂಕಿನ ತಿಮ್ಮಪ್ಪಗುಡಿಯಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಸುಮಾರು 550 ಎಕರೆ ಜಾಗದಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿದ್ದಾರೆ. ಹೀಗೆ ಕುಮಾರಸ್ವಾಮಿ ಆಡಳಿತಾವಧಿಯಲ್ಲಿಯೂ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಭಾರೀ ನಷ್ಟವಾಗಿದೆ ಎಂಬುದು ದೂರಿನ ಸಾರ.

ಗಣಿ ಮಾಲೀಕರಿಂದ ಕುಮಾರಸ್ವಾಮಿ ಸುಮಾರು 150 ಕೋಟಿ ರೂ. ಲಂಚ ಪಡೆದಿರುವ ಬಗ್ಗೆ ಅಂದಿನ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಸಹ ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+