ಗೆಲುವು ನನ್ನದೇ; ಸರ್ಕಾರ ಉರುಳಿಸೊಲ್ಲ: ಶ್ರೀರಾಮುಲು

'ನಾನು ಪಕ್ಷ ಕಟ್ಟುತ್ತೇನೆಯೇ ಹೊರತು, ಪಕ್ಷ ಕೆಡವುದಿಲ್ಲ. ಇದನ್ನು ತಿಳಿದುಕೊಂಡೇ ಬಿಜೆಪಿಯ ಎಲ್ಲ ನಾಯಕರು ಬಹಳ ಧೈರ್ಯದಿಂದ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ನನ್ನ ಜೊತೆ 40 ಮಂದಿ ಶಾಸಕರು ಇದ್ದಾರೆ. ಆದರೆ ಸರ್ಕಾರದ ವಿರುದ್ಧ ಅವಿಶ್ವಾಸ ತರುವುದಿಲ್ಲ. ಏಕೆಂದರೆ 6 ಕೋಟಿ ಜನರು ಬಿಜೆಪಿಯನ್ನು ಆಡಳಿತ ನಡೆಸುವಂತೆ ಚುನಾಯಿಸಿದ್ದಾರೆ. ಸರ್ಕಾರ ಕೆಡವಿದರೆ ಮತ ನೀಡಿರುವ ಜನರಿಗೆ ದ್ರೋಹ ಮಾಡಿದಂತೆ ಆಗುತ್ತದೆ.
ಅಂತಿಮ ಮತ ಎಣಿಕೆ ವಿವರ:
ಶ್ರೀರಾಮುಲು (ಪಕ್ಷೇತರ) 74,527
ರಾಮಪ್ರಸಾದ್ (ಕಾಂಗ್ರೆಸ್) 27,737
ಗಾದಿ ಲಿಂಗಪ್ಪ (ಬಿಜೆಪಿ) 17,366
ಆದ್ದರಿಂದ ಇನ್ನು ಒಂದು ವರ್ಷ ಅವಧಿ ಇದೆ. ಅಲ್ಲಿವರೆಗೂ ಅವರು ಆಡಳಿತ ನಡೆಸುತ್ತಾರೆ. ಅಮೇಲೆ ನನ್ನ ಶಕ್ತಿ ಏನು ಎಂದು ತೋರಿಸುತ್ತೇನೆ' ಎಂದು ಅವರು ಗದಗದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ನಾನು ಪ್ರಾದೇಶಿಕ ಪಕ್ಷ ಕಟ್ಟುವುದು ಶತಸಿದ್ಧ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಹೊಸ ಪಕ್ಷಕ್ಕೆ ನೆಲೆ ಬಂದ ಮೇಲೆ ಅದನ್ನು ರಾಜ್ಯದಾದ್ಯಂತ ವಿಸ್ತರಣೆ ಮಾಡಲಾಗುತ್ತದೆ. ಇದಕ್ಕೂ ಮೊದಲು ರಾಜ್ಯ ಪೂರ್ತಿ ಪ್ರವಾಸ ಮಾಡಿ, ಬಿಜೆಪಿಯಲ್ಲಿ ಇದ್ದಾಗ ನಡೆದ ಎಲ್ಲ ಘಟನೆಗಳನ್ನು, ಕಿರುಕುಳವನ್ನು ಬಿಡಿ ಬಿಡಿಯಾಗಿ ಜನರಿಗೆ ತಿಳಿಸುವೆ' ಎಂದು ಹೇಳಿದರು.












Click it and Unblock the Notifications