ಇನ್ಫೋಸಿಸ್ ನಾರಾಯಣಮೂರ್ತಿ ಕನ್ನಡದ ದೊಡ್ಡ ಶತ್ರು
ಧಾರವಾಡ,
ಡಿ. 2: ಇನ್ಫೋಸಿಸ್ ನಾರಾಯಣಮೂರ್ತಿ ಕನ್ನಡದ ದೊಡ್ಡ ಶತ್ರು. ತಮ್ಮ ಕಂಪನಿಗೆ ಕನ್ನಡಿಗರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳುವ ಮೂಲಕ ಅವರು ಕನ್ನಡ ನಾಡಿಗೆ ಅವಮಾನ ಮಾಡಿದ್ದಾರೆ ಎಂದು ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಕಿಡಿಕಾರಿದ್ದಾರೆ. id="toptextpromo">ಕರ್ನಾಟಕ
ವಿದ್ಯಾವರ್ಧಕ ಸಂಘ ನಗರದಲ್ಲಿ ಬುಧವಾರ ಆಯೋಜಿಸಿದ್ದ 'ಕನ್ನಡಿಗರಿಗೆ ಉದ್ಯೋಗ ಹಕ್ಕೊತ್ತಾಯ ಜಾಥಾ' ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಎನ್. ಆರ್. ನಾರಾಯಣ ಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದರು. id='are-slot-1' class='oiad oi-axt oiadv'> id='top-searched-articles'>'ಕರ್ನಾಟಕದ
ನೆಲದಲ್ಲಿರುವ ಅವರು ಈ ರೀತಿ ಮಾತನಾಡಬಾರದು. ಕರ್ನಾಟಕದಲ್ಲಿ ಗುಣಮಟ್ಟದ ಇಂಜಿನಿಯರಿಂಗ್ ಕಾಲೇಜುಗಳಿಲ್ಲ. ಇದರಿಂದಾಗಿ ಸರಿಯಾದ ತಾಂತ್ರಿಕ ಶಿಕ್ಷಣ ದೊರೆಯುತ್ತಿಲ್ಲ ಎಂದೆಲ್ಲ ಆರೋಪ ಮಾಡಿದ್ದಾರೆ. ಇಲ್ಲಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತ ಪದವೀಧರರಿಗೆ ಕೆಲಸ ಕೊಡುವ ಮನಸ್ಸಿಲ್ಲದಿದ್ದರೆ ತಮ್ಮದೇ ಆದ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸಿ ಕನ್ನಡಿಗರಿಗೆ ತಮಗೆ ಬೇಕಾದಂತೆ ಇಂಜಿನಿಯರಿಂಗ್ ಶಿಕ್ಷಣ ನೀಡಲಿ' ಎಂದು ಗಿರಡ್ಡಿ ಸಲಹೆ ನೀಡಿದರು.











Click it and Unblock the Notifications