ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯರನ್ನು ದಿನಕ್ಕೆ 60 ಲಕ್ಷ ರು ಕೇಳಿದ ಮುಂಬೈ ನಿಲ್ದಾಣ

By Mahesh
|
Google Oneindia Kannada News

Kingfisher to pay Rs 60 lakh a day
ಮುಂಬೈ, ಡಿ.2: ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಎರಡನೇ ತ್ರೈಮಾಸಿಕದಲ್ಲೂ ಭಾರಿ ನಷ್ಟ ಅನುಭವಿಸಿದ ನಂತರ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

ನಿಮ್ಮ ಏರ್ ಲೈನ್ ವಿಮಾನಗಳು ನಮ್ಮ ನಿಲ್ದಾಣ ಬಳಸಬೇಕಾದರೆ ಪ್ರತಿ ದಿನಕ್ಕೆ 60 ಲಕ್ಷ ರೂ ಪಾವತಿಸಬೇಕಾಗುತ್ತದೆ ಎಂದು ಮುಂಬೈ ಅಂತಾರಾಷ್ಟ್ರೀಯ ಏರ್ ಪೋರ್ಟ್ ಪ್ರೈ.ಲಿ(MIAL) ಕಿಂಗ್ ಫಿಷರ್ ಒಡೆಯ ವಿಜಯ್ ಮಲ್ಯರಿಗೆ ನೋಟಿಸ್ ಕಳಿಸಿದೆ.

ದಿನಕ್ಕೆ 60ಲಕ್ಷ ರೂ ಕಟ್ಟದ ಹೊರತು ಕಿಂಗ್ ಫಿಷರ್ ವಿಮಾನ ಪಾರ್ಕ್ ಅಥವಾ ನಿಲ್ದಾಣದಲ್ಲಿ ನಿಲ್ಲಿಸಲು MIAL ಬಿಡುವುದಿಲ್ಲ.

ಕಿಂಗ್ ಗೆ ಶಾಕ್: ಕಿಂಗ್ ಫಿಷರ್ ನಂತೆ ಇತರೆ ಕಂಪನಿಗಳು ಸಹ ಸಾಲದ ಸುಳಿಯಲ್ಲಿದೆ. ಪ್ರತಿ ತಿಂಗಳಿನಿಂದ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ MIALಗೆ ಇಂತಿಷ್ಟು ಎಂದು ನೀಡಲಾಗುತ್ತದೆ. ಆದರೂ ಕಿಂಗ್ ಫಿಷರ್ ಸಾಲದ ಬಾಲ ಹೆಚ್ಚಾದ್ದರಿಂದ MIAL ಈ ಕಠಿಣ ಕ್ರಮ ಕೈಗೊಂಡಿದೆ.

ಸುಮಾರು 90 ಕೋಟಿ ರೂ ಅಧಿಕ ಸಾಲ ಉಳಿಸಿಕೊಂಡಿರುವ ಕಿಂಗ್ ಫಿಷರ್ ಮುಖಕ್ಕೆ 'ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ' ಎಂಬ ಬೋರ್ಡ್ ತೋರಿಸಿರುವ MIAL, ಕ್ಯಾಶ್ ಅಂಡ್ ಕ್ಯಾರಿ ಪದ್ಧತಿಯಂತೆ ವಿಮಾನ ನಿಲ್ದಾಣ ಬಳಸುವಂತೆ ಸೂಚಿಸಿದೆ.

ಮಲ್ಯಗೆ ಮತ್ತೆ ಕಹಿ ಸುದ್ದಿ: ಎರಡನೇ ತ್ರೈಮಾಸಿಕದಲ್ಲಿ 468 ಕೋಟಿ ರೂ ನಷ್ಟ ಅನುಭವಿಸಿದ್ದ ಕಿಂಗ್ ಫಿಷರ್ ಇನ್ನೂ ಬ್ಯಾಂಕ್ ಗಳ ಜೊತೆ ಮಾತುಕತೆ ನಡೆಸುತ್ತಲೇ ಇದೆ. ಡಿ.1 ವಿಮಾನಯಾನ ಇಂಧನದ ದರ ಶೇ.3.7ರಷ್ಟು ಹೆಚ್ಚಾಗಿದ್ದು, ಸಮಸ್ಯೆ ಇನ್ನಷ್ಟು ಜಟಿಲಗೊಳಿಸಲಿದೆ. (ಗುಡ್ ರಿಟರ್ನ್ಸ್)

English summary
Cash-strapped Kingfisher Airlines again kept on cash-and-carry basis by Mumbai Airport on Thursday(Dec.1). Mumbai International Airport Pvt. Ltd. (MIAL) sent a notice to Kingfisher Airlines saying, it will have to pay Rs 60 lakh a day for using airport services like parking and landing of aircraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X