ಪಾಪ! ಜಗನ್ ಮನೆಗೆ ನೀರು ಕೊಡದ ಆಂಧ್ರ ಸರಕಾರ

no-water-line-to-jagan-reddy-bungalow-hyderabad
ಹೈದರಾಬಾದ್, ನ. 30: ಕಾಂಗ್ರೆಸ್ ಪಕ್ಷವನ್ನು ಎದುರು ಹಾಕಿಕೊಂಡು ಹುಡುಗಾಟ ಆಡುತ್ತಿರುವ ಮಾಜಿ ಮುಖ್ಯಮಂತ್ರಿ ವೈಎಸ್ಆರ್ ಅವರ ಪುತ್ರ, ಕಡಪ ಸಂಸದ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಸಿಬಿಐ ಛೂ ಬಿಟ್ಟಿದ್ದೂ ಅಲ್ಲದೆ ರಾಜ್ಯ ಸರಕಾರ ಕಳೆದ 6 ತಿಂಗಳಿಂದ ಅವರ ಮನೆಗೆ ಹೊಸ ನೀರಿನ ಸಂಪರ್ಕವನ್ನೂ ಕಲ್ಪಿಸದೆ ಸತಾಯಿಸುತ್ತಿದ್ದ.

ಈ ಹಿಂದೆ ಅತ್ಯಂತ ಪ್ರಭಾವಿ ಯುವ ನಾಯಕ ಎನಿಸಿಕೊಂಡಿದ್ದ ಜಗನ್ ಪ್ರತಿಷ್ಠಿತ, ಪರಮ ಶ್ರೀಮಂತ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ವೈಭವೋಪೇತ ಬಂಗಲೆಯನ್ನು ಎಬ್ಬಿಸುತ್ತಿರುವುದು ಹಳೆಯ ಸುದ್ದಿ. ಆದರೆ ಅಂತಹ ಮನೆಗೆ ಸ್ಥಳೀಯ ಮುನ್ಸಿಪಾಲಿಟಿ ಮಂದಿ ಹೊಸ ವಾಟರ್ ಕನೆಕ್ಷನ್ ನೀಡದೆ ಅದೂ ಇದೂ ಎಂದು ಸತಾಯಿಸುತ್ತಿದ್ದಾರೆ.

ಹೊಸ ಮನೆಗೆ ವಾಟರ್ ಕನೆಕ್ಷನ್ ಕೊಡಿ ಎಂದು ಆರು ತಿಂಗಳ ಹಿಂದೆಯೇ ಜಗನ್ ಅವರು ಹೈದರಾಬಾದ್ ಸಲ್ಲಿಸಿರುವ ಅರ್ಜಿ ಜಲ ಮಂಡಳಿಯಲ್ಲಿ ಒದ್ದೆಯ ಮುದ್ದೆಯಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ಜಗನ್ ಬಂಗಲೆಯಿಂದ ಕೇವಲ 200 ಮೀಟರ್ ದೂರದಲ್ಲಿ ಹಳೆಯ ವಾಟರ್ ಲೈನ್ ಇದೆ. ಆದರೂ ಸ್ಥಳೀಯ ಮಟ್ಟದಲ್ಲಿ ಕೆಲವು ಸಮಸ್ಯೆಗಳಿವೆ. ಆದ್ದರಿಂದ ಹೊಸ ಕನೆಕ್ಷನ್ ನೀಡುತ್ತಿಲ್ಲ ಎಂದು ಜಲ ಮಂಡಳಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.

ಇದೇ ವೇಳೆ, ಜಗನ್ Occupancy Certificate (OC) ಸಲ್ಲಿಸದಿರುವುದರಿಂದ ಹೊಸ ಕನೆಕ್ಷನ್ ನೀಡುತ್ತಿಲ್ಲ ಎಂದೂ ಜಲಮಂಡಳಿ ಅಧಿಕಾರಿಗಳು ಕೊಕ್ಕೆ ಹಾಕಿದ್ದಾರೆ. ಈ ಮಧ್ಯೆ, ಜಗನ್ ಆಸ್ತಿಪಾಸ್ತಿ ಬಗ್ಗೆ ಸಿಬಿಐ ತನ್ನ ತನಿಖೆಯನ್ನೂ ಮತ್ತಷ್ಟು ತೀವ್ರಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+