ಮಡೆಸ್ನಾನ ವಿರೋಧಿಸಿದ ದಲಿತರಿಗೆ ಬಿತ್ತು ಗೂಸಾ

ಸುಳ್ಯ, ನ.30: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಅಂಗವಾಗಿ ಮೂರು ದಿನಗಳ ಕಾಲ ವಾರ್ಷಿಕ ಮಡೆಸ್ನಾನ ಅಥವಾ ಉರುಳುಸೇವೆ ಆಚರಣೆಗೆ ವಿರೋಧಿಸಿದ ದಲಿತ ಮುಖಂಡರಿಗೆ ಸ್ಥಳೀಯರಿಂದ ಸರಿಯಾದ ಗೂಸಾ ಸಿಕ್ಕಿದೆ.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಸೇರಿದಂತೆ ಐವರ ಮೇಲೆ ದೇವಸ್ಥಾನದ ಸಿಬ್ಬಂದಿ ಹಾಗೂ ಅನಾದಿ ಕಾಲದಿಂದಲೂ ಮಡೆಸ್ನಾನ ಮಾಡಿಕೊಂಡು ಬಂದಿರುವ ಮಲೆಕುಡಿಯರು ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲ್ಲೆಗೊಳಗಾದವರನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪುರೋಹಿತಶಾಹಿಗಳು ತಿಂದುಂಡ ಎಂಜಲೆಲೆ ಮೇಲೆ ಉರುಳು ಸೇವೆ ಮಾಡಿಸಿ ಕೆಳವರ್ಗದವರಲ್ಲಿ ಮೌಢ್ಯವನ್ನು ಬಿತ್ತುತ್ತಿರುವ ಸದಾನಂದ ಗೌಡರು ಹಾಗೂ ವಿಎಸ್ ಆಚಾರ್ಯ ಅವರ ಕುಮ್ಮಕ್ಕಿನಿಂದಲೇ ಮಡೆಸ್ನಾನ ನಿರಾಂತಕವಾಗಿ ನಡೆದಿದೆ ಎಂದು ಹಿಂದುಳಿದ ವರ್ಗಗಳ ಜಾಗೃತಾ ವೇದಿಕೆಯ ಸಿದ್ದಲಿಂಗಯ್ಯ ಅವರು ಆರೋಪಿಸಿದ್ದಾರೆ.

ಮೂಢನಂಬಿಕೆ ಬಿತ್ತುವ ಈ ಸಾಮಾಜಿಕ ಅನಿಷ್ಟ ಪದ್ಧತಿಯನ್ನು ಶಾಶ್ವತವಾಗಿ ನಿಷೇಧಿಸಬೇಕು. ಮಡೆಸ್ನಾನದ ವಿರುದ್ಧ ಪ್ರಗತಿಪರ, ದಲಿತ ಹಿಂದುಳಿದ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಶಿವರಾಮು ಎಚ್ಚರಿಸಿದ್ದಾರೆ.

ಸರ್ಕಾರ ಮಡೆಸ್ನಾನಕ್ಕೆ ಒಪ್ಪಿಗೆ ನೀಡಿದ್ದು ಏಕೆ?: ಮಡೆಸ್ನಾನಕ್ಕೆ ಜಿಲ್ಲಾಡಳಿತ ನಿಷೇಧ ಹೇರಿರುವ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ಸರ್ಕಾರದ ಆದೇಶ ಪ್ರತಿಭಟಿಸಿ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಸೇವೆ ನಡೆಯದಿದ್ದಲ್ಲಿ ರಥ ಕಟ್ಟುವ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

ಕೊನೆಗೆ ವಿಧಿ ಇಲ್ಲದೆ ನಿಷೇಧ ವಾಪಾಸ್ ತೆಗೆದುಕೊಳ್ಳಲಾಗಿತ್ತು. ಚಂಪಾಷಷ್ಠಿ ಜಾತ್ರೋತ್ಸವ ಸಂದರ್ಭ ಮೂರು ದಿನಗಳ ಕಾಲ ಚೌತಿ, ಪಂಚಮಿ, ಷಷ್ಠಿ ದಿನ ಗಳಂದು ದೇವಳದ ಹೊರಾಂಗಣದಲ್ಲಿ ನಡೆಯುವ ಮಡೆಸ್ನಾನ ಸೇವೆಯಲ್ಲಿ ಸಾವಿರಾರು ಭಕ್ತು ಪಾಲ್ಗೊಂಡು ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.

ಪೇಜಾವರ ಶ್ರೀಗಳಿಗೆ ದಲಿತರ ಹಾಕಿರುವ ಬಹಿರಂಗ ಸವಾಲ್ ಏನು...?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+