ಬಸವಳಿದ ಬಳ್ಳಾರಿಗೆ ತಂಪೆರೆದ ಹೇಮಾಮಾಲಿನಿ

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೇಲೆ ಉಡದ ಪಟ್ಟು ಹಿಡಿದಿರುವ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲುವಿಗೆ ಸೆಡ್ಡುಹೊಡೆದಿರುವ ಬಿಜೆಪಿಯ ಗಾದಿ ಲಿಂಗಪ್ಪ ಪರ ಪ್ರಚಾರಕ್ಕೆ ಕನಸಿನ ಕನ್ಯೆ, ರಾಜ್ಯಸಭಾ ಸದಸ್ಯೆ ಹೇಮಾಮಾಲಿನಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದಿದ್ದರು.
ಪಕ್ಕದಲ್ಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಇದ್ದರೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಡಿದ ಸಾಧನೆಗಳನ್ನು ಪರಿಪರಿಯಾಗಿ ನೆನಪಿಸಿಕೊಂಡ ಹೇಮಾಮಾಲಿನಿ, ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಿಕೊಡಬೇಕೆಂದು, ರೋಡ್ ಶೋ ಉದ್ದಕ್ಕೂ ನಿಂತಿದ್ದ ಸಹಸ್ರಾರು ಜನರನ್ನು ಕೈಮುಗಿದು ಕೋರಿದರು. ಪಕ್ಕದಲ್ಲಿ ಡಿವಿಎಸ್ ನಗುನಗುತಾ ನಿಂತಿದ್ದರು.
ಕರ್ನಾಟಕದಲ್ಲಿ ಅನೇಕ ವಿವಾದಗಳಾಗಿವೆ. ಬಿಜೆಪಿಯ ಅನೇಕ ನಾಯಕರು ಅದರಲ್ಲಿ ಸಿಲುಕಿಕೊಂಡಿದ್ದರೂ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿಯ ಕೆಲಸ ಮಾಡಿದ್ದಾರೆ. ಮುಂದೆಯೂ ಬಿಜೆಪಿಯಿಂದ ಅಭಿವೃದ್ಧಿ ನಡೆಯಲಿವೆ ಎಂಬ ವಿಶ್ವಾಸವಿದೆ ಎಂದು ಹೇಮಾಮಾಲಿನಿ ಭಾಷಣ ಬಿಗಿದರು.












Click it and Unblock the Notifications