ಅಂತೂ ಶ್ರೀಲಕ್ಷ್ಮಿಯನ್ನು 3 ದಿನ ವಶಕ್ಕೆ ತೆಗೆದುಕೊಂಡ ಸಿಬಿಐ
ಹೈದರಾಬಾದ್,
ನ. 29: ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಸೋಮವಾರ ಸಂಜೆ ಸಿಬಿಐ ಬಂಧನಕ್ಕೊಳಗಾದ ಹಿರಿಯ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವರನ್ನು ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. id="toptextpromo">ಮಂಗಳವಾರ
ಬೆಳಗ್ಗೆ ಸಿಬಿಐ ಶ್ರೀಲಕ್ಷ್ಮಿ ಅವರನ್ನು ಕೋರ್ಟಿನಲ್ಲಿ ಹಾಜರುಪಡಿಸಿತು. ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಸ್ಥ ರಾಜಕಾರಣಿಗಳೂ ಶಾಮೀಲಾಗಿರುವ ಗುಮಾಣಿಯ ಮೇಲೆ ಈಕೆಯನ್ನು ಇನ್ನೂ ವಿಚಾರಣೆಗೊಳಪಡಿಸಬೇಕು. 10 ದಿನಗಳ ಕಾಲ ನಮ್ಮ ಸುಪರ್ದಿಗೆ ಒಪ್ಪಿಸಿ ಎಂದು ಕೋರ್ಟಿಗೆ ಸಿಬಿಐ ಮನವಿ ಮಾಡಿಕೊಂಡಿತ್ತು. id='are-slot-1' class='oiad oi-axt oiadv'> id='top-searched-articles'>ಆದರೆ
3 ದಿನ ಮಾತ್ರ ಶ್ರೀಲಕ್ಷ್ಮಿಯನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿದ ಕೋರ್ಟ್, ಆನಂತರ ಡಿಸೆಂಬರ್ 12 ವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಆದೇಶಿಸಿದೆ. ತನಗೆ ಹೃದಯ ಬೇನೆ ಇದೆ. ಆರೋಗ್ಯ ಸರಿಯಿಲ್ಲ. ನನ್ನನ್ನು ಬಂಧಿಸಬೇಡಿ ಎಂದು ತಮ್ಮ ವಕೀಲರ ಮುಖಾಂತರ ಶ್ರೀಲಕ್ಷ್ಮಿ ಕೋರ್ಟಿನಲ್ಲಿ ಪರಿಪರಿಯಾಗಿ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ.











Click it and Unblock the Notifications