ನಿಧಿಯಾಸೆಗೆ ಭೂಮಿ ಬಗೆದ ಖದೀಮರ ಬಂಧನ

ಮಲ್ಲಾರ ಗ್ರಾಮದ ಹೊರವಲಯದ ನಾಗಲಿಂಗ ದೇವಸ್ಥಾನ ಆವರಣದಲ್ಲಿ ವಜ್ರ, ಚಿನ್ನಗಳಿರುವ ನಿಧಿ ಸಿಗುತ್ತೆ ಎಂದು ರಾಯಚೂರು ಮೂಲದ ಸ್ವಾಮೀಜಿಗಳಿಗೆ ಎಂಬ ಆಮಿಷ ಒಡ್ಡಿ ಲಕ್ಷ್ಮೀ ಪೂಜೆ ಮಾಡಿಸಿದ್ದಾರೆ. ಒಟ್ಟು 15 ಜನರಿದ್ದ ತಂಡ ದೇವಸ್ಥಾನದಲ್ಲಿ ನಿಧಿ ಹುಡುಕುವಿಕೆಯಲ್ಲಿ ಭಾಗಿಯಾಗಿದೆ.
ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ನಿಧಿ ಶೋಧನೆ ಕಾರ್ಯ ನಡೆದಿದೆ. ಆದರೆ ಸಿಕ್ಕಿದ್ದು ಮಾತ್ರ ಮಣ್ಣು. ಈ ಸುದ್ದಿ ಹೇಗೋ ಗ್ರಾಮಸ್ಥರಿಗೆ ತಿಳಿದುಬಂದಿದೆ. ಕೂಡಲೆ ದೇವಸ್ಥಾನಕ್ಕೆ ಲಗ್ಗೆ ಹಾಕಿ ಮೂವರು ನಿಧಿಗಳ್ಳರನ್ನು ಹಿಡಿದಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ.
ಭೂಶಪ್ಪ ತಾತಾ, ಸುಬ್ಬರಾವ್ ಮತ್ತು ಚಿನ್ನಣ್ಣ ಈ ಮೂವರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಪ್ಪಿಸಿಕೊಳ್ಳಬಾರದೆಂದು ಕೋಣೆಯಲ್ಲಿ ಕೂಡಿಹಾಕಿ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಕ್ಕಿಬಿದ್ದ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.












Click it and Unblock the Notifications