ಯಡಿಯೂರಪ್ಪಗೆ ಮುಂದಿನ ಸೋಮವಾರ ಏನು ಕಾದಿದೆಯೋ!?

ಸಿರಾಜಿನ್ ಬಾಷಾ ಅವರು ಸಲ್ಲಿಸಿದ್ದ ಮೂರನೇ ಖಾಸಗಿ ದೂರಿನ ಸಂಬಂಧ, ದೂರುದಾರರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ಅಂಗೀಕರಿಸಿದ್ದು, ಮುಂದಿನ ಸೋಮವಾರ (ಡಿ. 5) ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸೂಚಿಸಿದೆ.
ದೂರುದಾರರ ವಾದ ನ್ಯಾಯಸಮ್ಮತವಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ಮನವರಿಕೆಯಾದರೆ ತಕ್ಷಣ ಯಡಿಯೂರಪ್ಪ ಅವರ ಜಾಮೀನನ್ನು ರದ್ದುಪಡಿಸಿ, ಅವರನ್ನು ಮತ್ತೆ ಬಂಧಿಸುವಂತೆ ಆದೇಶಿಸಬಹುದು. ಹಾಗಾಗುತ್ತದಾ? ಕಾದು ನೋಡಬೇಕು.
ಬೆಂಗಳೂರು ಲೋಕಾಯುಕ್ತ ನ್ಯಾಯಾಲಯ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ ಎನ್ನಲಾದ ಭೂ ಹಗರಣ ಕುರಿತು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಬಂಧಿತರಾಗಿ 24 ದಿನ ಸೆರೆವಾಸ ಅನುಭವಿಸಿದ ಮಾಜಿ ಮುಖ್ಯಮಂತ್ರಿ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ












Click it and Unblock the Notifications