ಕೆಎಂಎಫ್: 'ಸ್ವಾಭಿಮಾನಿ' ಸೋಮರೆಡ್ಡಿ ಅಧ್ಯಕ್ಷ ಸ್ಥಾನಕ್ಕೆ ಬಂತು ಸಂಚಕಾರ

ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರುಗಳಾದ ರೇವಣ್ಣ ಸಿದ್ದಪ್ಪ, ಪಿ.ನಾಗರಾಜ, ಮಲ್ಲಿಕಾರ್ಜುನ್ ಬೇಗೂರು, ಮಂಜುಳಾ ಬಿರಾದಾರ, ಅಶೋಕ್, ಎಚ್.ಕೆ. ರೇಣುಕಾ ಪ್ರಸಾದ್, ಸತೀಶ್ ಭಟ್, ಸಂಜಯ್ ಪಾಟೀಲ್, ಅಶ್ವಥ್ ನಾರಾಯಣ, ರವಿರಾಜ್ ಹೆಗಡೆ ಮತ್ತಿತರರು ಸೋಮಶೇಖರ ರೆಡ್ಡಿಯನ್ನು ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ.
ಬಿಜೆಪಿ ಬೆಂಬಲದಿಂದ ಸೋಮಶೇಖರ ರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಪರ ಪ್ರಚಾರ ಮಾಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬುದು ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ರೇವಣ್ಣ ಸಿದ್ದಪ್ಪ ಅವರ ಮುಖ್ಯ ದೂರು.
ಸೋಮಶೇಖರ ರೆಡ್ಡಿ ಅವರನ್ನು ಮೊದಲ ಬಾರಿಗೆ ಕೇವಲ ಮೂರು ತಿಂಗಳ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರನ್ನು ಮುಂದುವರಿಸಲಾಗಿತ್ತು. ಎರಡನೆ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸಂದರ್ಭದಲ್ಲಿ ರೆಡ್ಡಿ ಸಹೋದರರು ಸಂಕಷ್ಟದಲ್ಲಿದ್ದ ಹಿನ್ನೆಲೆಯಲ್ಲಿ ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.
ಸೋಮಶೇಖರ ರೆಡ್ಡಿ ಶ್ರೀರಾಮುಲು ಬೆಂಬಲಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದು, ಅವರಿಗೆ ಪಕ್ಷಕ್ಕಿಂತ ಸ್ವಾಭಿಮಾನವೇ ಹೆಚ್ಚಾದರೆ ತಕ್ಷಣವೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರೇವಣ್ಣ ಸಿದ್ದಪ್ಪ ಸವಾಲು ಹಾಕಿದರು.












Click it and Unblock the Notifications