ಕುಕ್ಕೆ ಸುಬ್ರಮಣ್ಯ: ಮಡೆಸ್ನಾನ ನಿಷೇಧ ಹಿಂತೆಗೆತ

ಸಾವಿರಾರು ಭಕ್ತಾದಿಗಳು ಹರಕೆ ರೂಪದಲ್ಲಿ ಮಾಡುತ್ತಿದ್ದ ಮಡೆಸ್ನಾನ ಸೇವೆಗೆ ಈ ಬಾರಿ ಅವಕಾಶವಿಲ್ಲ ಎಂದು ದೇವಳದ ಆಡಳಿತಾಧಿಕಾರಿ ಸುಂದರಭಟ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್‌ಎಂ ಕಾಳಿ ಅವರು ಹೇಳಿದ್ದರು.
ಆದರೆ, ಧಾರ್ಮಿಕ ಆಚರಣೆಗೆ ಭಕ್ತಾದಿಗಳಿಂದ ಭಾರಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನಿಷೇಧವನ್ನು ವಾಪಾಸ್ ಪಡೆಯಲಾಗಿದೆ ಎಂದು ಸುಂದರ ಭಟ್ ಹೇಳಿದರು.
ಐತಿಹಾಸಿಕ ಕ್ಷೇತ್ರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಟ್ಟಿದೆ. ಮಡೆಸ್ನಾನ (ಬ್ರಾಹ್ಮಣರು ಉಂಡ ಎಲೆಯ ಮೇಲೆ ನಡೆಸುವ ಉರುಳು ಸೇವೆ) ವಿಶೇಷವಾಗಿ ಭಕ್ತಾದಿಗಳು ಸ್ವ ಇಚ್ಛೆಯಿಂದ ನಡೆಸುವ ಒಂದು ಸೇವೆ.
ಆದರೆ, ದೇವಸ್ಥಾನದ ಸೇವಾಪಟ್ಟಿಯಲ್ಲಿ ಈ ಸೇವೆ ಸೇರಿರುವುದರಿಂದ ದೇಗುಲದ ಆಡಳಿತ ಮಂಡಳಿಯ ಕುಮ್ಮಕು ಇದೆ ಎಂದು ದಲಿತ ಸಂಘಟನೆಗಳು ದೂರಿದೆ.












Click it and Unblock the Notifications