ನಾನು ಮಾಡಿದ್ದು ನೀವು ಮಾಡ್ತೀರಾ, ಸೋನಿಯಾಜಿ?

ಸಾಮಾಜಿಕ ಜಾಲ ತಾಣ ಟ್ವೀಟರ್‌ನಲ್ಲಿ ತಮ್ಮ ಆಸ್ತಿ ಬಗ್ಗೆ, ಭ್ರಷ್ಟಾಚಾರ ಹಾಗೂ ಕಪ್ಪುಹಣದ ಬಗ್ಗೆ ಬಿಜೆಪಿ ಹೋರಾಟದ ಬಗ್ಗೆ ಅನಂತ್ ಬರೆದುಕೊಂಡಿದ್ದಾರೆ.
ನನ್ನ ಆಸ್ತಿ ವಿವರಗಳ ಬಗ್ಗೆ ಲೋಕಾಕ ಸಭಾಧ್ಯಕ್ಷರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದೇನೆ ಎಂದು ಟ್ವೀಟಿಸಿದ್ದಾರೆ.
ಸೋನಿಯಾಜಿ, ರಾಹುಲ್‌ಜಿ ಮತ್ತು ಇತರ ಕಾಂಗ್ರೆಸ್ ಸಂಸದರು ಇದೇ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದಾರಾ? ಎಂದು ಅನಂತ್ ಪ್ರಶ್ನಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕ ಲಾಲಕೃಷ್ಣ ಅಡ್ವಾಣಿ ಇತ್ತೀಚೆಗಷ್ಟೇ ತಮ್ಮ ಜನಚೇತನ ಯಾತ್ರೆ ಸಮಾರೋಪ ನಡೆಸಿ, 'ಎನ್‌ಡಿಎ ಸಂಸದರು ವಿದೇಶದಲ್ಲಿ ಕಪ್ಪುಹಣವಾಗಲಿ, ಅಕ್ರಮ ಆಸ್ತಿಯನ್ನಾಗಲಿ ಹೊಂದಿಲ್ಲ ಎಂದು ಮುಚ್ಚಳಿಕೆ ಕೊಡಲಿದ್ದಾರೆ' ಎಂದು ವೇಳೆ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಜನಚೇತನ ಯಾತ್ರೆ ಸಂಚಾಲಕರೂ ಆಗಿದ್ದ ಸಂಸದ ಅನಂತ್ ಕುಮಾರ್ ಈ ರೀತಿ ಘೋಷಣೆ ಮಾಡಿಕೊಂಡಿದ್ದಾರೆ.ಅನಂತ್ ಅವರ ಮಾದರಿಯಲ್ಲೇ ಎನ್ ಡಿಎ ಸಂಸದರು ಮುಚ್ಚಳಿಕೆ ಬರೆದುಕೊಡುವ ನಿರೀಕ್ಷೆಯಿದೆ.












Click it and Unblock the Notifications