ವಾಲ್ಮಾರ್ಟ್ ಕಾಲಿಡಲು ಬಿಡುವುದಿಲ್ಲ: ಜಯಲಲಿತಾ

'ಈ ಹೊಸ ವಾಣಿಜ್ಯ ನೀತಿ ಅಳವಡಿಕೆಗೆ ನಮ್ಮ ರಾಜ್ಯದಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.
ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ (MBRT) ಶೇ. 51ರಷ್ಟು ಎಫ್‌ಡಿಐ ಆಕರ್ಷಿಸುವ ಹೊಸ ನೀತಿಯನ್ನು ರಾಜ್ಯ ಸರ್ಕಾರಗಳು ಕಾರ್ಯರೂಪಕ್ಕೆ ತರಬೇಕು ಎಂಬ ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮ ಹೇಳಿದ್ದರು.
ಬಹುರಾಷ್ಟ್ರೀಯ ಕಂಪೆನಿಗಳು ಚಿಲ್ಲರೆ ಮಾರಾಟ ವಲಯಕ್ಕೆ ಕಾಲಿಡಲು ಅವಕಾಶ ನೀಡುವುದಿಲ್ಲ. ಈ ನೀತಿ ವಿರೋಧಿಸುತ್ತಿರುವ ಎಡಪಕ್ಷಗಳು ಮತ್ತು ಬಿಜೆಪಿ ನಮ್ಮ ಎಐಎಡಿಎಂಕೆ ಬೆಂಬಲವಿದೆ ಎಂದು ಜಯಾ ಹೇಳಿದ್ದಾರೆ.
ಎಫ್ ಡಿಐನಿಂದ ಹಣದುಬ್ಬರ ಕೀಮೆ ಆಗುವುದಿಲ್ಲ ಬದಲಿಗೆ ಸ್ಥಳೀಯ ಉತ್ಪಾದಕರಿಗೆ ಮತ್ತು ಸೇವಾ ಕ್ಷೇತ್ರದ ಮೇಲೆ ಭಾರಿ ಹೊಡೆತ ಬೀಳುತ್ತದೆ ಎಂದು ಜಯಲಲಿತಾ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications