ಸಿಬಿಐ ಮುಷ್ಟಿಯಿಂದ ಗಾಲಿ ಜನಾರ್ದನ ರೆಡ್ಡಿ ಪಾರು?

ಜನಾರ್ದನ ರೆಡ್ಡಿ ಅವರ ನ್ಯಾಯಾಂಗ ಬಂಧನದ ಅವಧಿ ನ.28ಕ್ಕೆ ಮುಕ್ತಾಯವಾಗಲಿದೆ, ನಾಂಪಲ್ಲಿಯ ಸಿಬಿಐ ನ್ಯಾಯಾಲಯದಲ್ಲಿ ಗಾಲಿ ರೆಡ್ಡಿ ಅವರ ಬಂಧನ ಅವಧಿ ವಿಸ್ತರಣೆ, ಜಾಮೀನು ನೀಡುವುದರ ಬಗ್ಗೆ ವಿಚಾರಣೆ ನಡೆಯಲಿದೆ.
ಜನಾರ್ದನ ರೆಡ್ಡಿ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಸಿಬಿಐ ವಶಪಡಿಸಿಕೊಂಡ ಸ್ವತ್ತಿನ ಮೌಲ್ಯ ಸುಮಾರು 294 ಕೋಟಿ ರೂ ಎನ್ನಲಾಗಿದೆ. ರೆಡ್ಡಿಗಳ ಅಕ್ರಮ ಆಸ್ತಿ ಬಗ್ಗೆ ತನಿಖೆಗೆ ಸಿಬಿಐ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಹಾಗೂ ರಾಜಗೋಪಾಲ್ ಅವರು ನೀಡಿರುವ ಮಾಹಿತಿ ಆಧಾರದ ಮೇಲೆ ಮುಂದಿನ ತನಿಖೆಗೆ ನ್ಯಾಯಾಲಯ ಸೂಚಿಸುವ ಸಾಧ್ಯತೆಯಿದೆ.
ಸಿಬಿಐಗೆ ಅಗತ್ಯ ಮಾಹಿತಿ ಲಭ್ಯವಾಗಿರುವುದರಿಂದ ರೆಡ್ಡಿಗಳನ್ನು ಜೈಲಿನಲ್ಲಿ ವಿಶೇಷ ಸ್ಥಾನಮಾನ ನೀಡಿ ಇರಿಸಿಕೊಳ್ಳುವುದು ಏಕೆ ಎಂಬ ಪ್ರಶ್ನೆ ಕೋರ್ಟ್ ಮುಂದಿದೆ. ರೆಡ್ಡಿಗಳು ಹೈದರಾಬಾದಿನ ಜೈಲಿನಿಂದ ಹೊರಬಿದ್ದರೂ, ಕರ್ನಾಟಕದಲ್ಲಿ ಸಿಬಿಐ ದಾಖಲಿಸಿರುವ ಹೊಸ ಎಫ್ಐಆರ್ ಆಧಾರದ ಮೇಲೆ ಮತ್ತೆ ವಿಚಾರಣೆಗಾಗಿ ಬಂಧಿಸುವ ಸಾಧ್ಯತೆಯಿದೆ.
ಹೈದರಾಬಾದಿನ ಚಂಚಲಗುಡ ಜೈಲಿನಿಂದ ಹೊರ ಬಿದ್ದರೂ ರೆಡ್ಡಿಗಳನ್ನು ಕರ್ನಾಟಕದ ಜೈಲಿನಲ್ಲಿರಿಸಿ ವಿಚಾರಣೆಗೆ ಒಳಪಡಿಸಲು ಸಿಬಿಐ ಸಿದ್ಧತೆ ನಡೆಸಿದೆ ಎನ್ನಲಾಗಿದೆ.












Click it and Unblock the Notifications