ಬಿಬಿಎಂಪಿ ಆಯುಕ್ತ ಸಿದ್ದಯ್ಯ ಟ್ರಾನ್ಸ್ ಫರ್, ತನಿಖೆ ಸಿಒಡಿಗೆ

BBMP Commissioner Siddaiah
ಬೆಂಗಳೂರು, ನ.28: ಶಿಸ್ತಿನ ಸಿಪಾಯಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರನ್ನು ವರ್ಗಾವಣೆ ಮಾಡಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸೋಮವಾರ(ನ.28)ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಬಹುಕೋಟಿ ಬಿಬಿಎಂಪಿ ಹಗರಣವನ್ನು ಸಿಒಡಿ ತನಿಖೆಗೆ ವಹಿಸುವುದಾಗಿ ಸಿಎಂ ಸದಾನಂದ ಗೌಡ ಹೇಳಿದರು.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡರನ್ನು ಸಿದ್ದಯ್ಯ ಅವರ ಸ್ಥಾನಕ್ಕೆ ನಿಯೋಜನೆ ಮಾಡಲಾಗಿದೆ. ಆದರೆ, ಸಿದ್ದಯ್ಯ ಅವರಿಗೆ ಯಾವುದೇ ಸ್ಥಾನವನ್ನು ನೀಡಿಲ್ಲ. ಬಹುಕೋಟಿ ಬಿಬಿಎಂಪಿ ಹಗರಣದ ತನಿಖೆ ಜಾರಿಯಲ್ಲಿರುವ ಸಂದರ್ಭದಲ್ಲೇ ಸಿದ್ದಯ್ಯ ಅವರ ವರ್ಗಾವಣೆಯಾಗಿರುವುದು ಕುತೂಹಲ ಮೂಡಿಸಿದೆ.

ಆದರೆ, ಬಿಡಿಎ ನಿಂದ ಎರಡು ಸಿಎ ಸೈಟು ಪಡೆದ ಆರೋಪ ಎದುರಿಸುತ್ತಿದ್ದಾರೆ. ಹಾಗಾಗಿ ಈ ಮುಂಚೆ ಸಿದ್ದಯ್ಯ ಅವರ ವರ್ಗಾವಣೆ ವಿರುದ್ಧ ದನಿ ಎತ್ತಿದ್ದ ವಿಪಕ್ಷಗಳು ಕೂಡಾ ಈಗ ಮೆತ್ತಗಾಗಿದೆ.

ರಾಜರಾಜೇಶ್ವರಿ ನಗರ, ಮಲ್ಲೇಶ್ವರಂ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ವಾರ್ಡ್ ಗಳಲ್ಲಿ ಸುಮಾರು 1539 ಕೋಟಿ ರು ಅವ್ಯವಹಾರ ನಡೆದಿದೆ ಎಂಬ ಆರೋಪದ ತನಿಖೆಯನ್ನು ಜನಪ್ರತಿನಿಧಿಗಳನ್ನು ಕೇಳದ ಬಿಎಂಟಿಎಫ್ ಗೆ ಸಿದ್ದಯ್ಯ ವಹಿಸಿದ್ದರು. ಈ ಮಧ್ಯೆ ಬಿಬಿಎಂಪಿ ಕಟ್ಟಡಕ್ಕೆ ಬೆಂಕಿ ಬಿದ್ದು ಮಹತ್ವದ ದಾಖಲೆಗಳು ನಾಶವಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಬಿಎಂಟಿಎಫ್, 13 ಜನ ಅಧಿಕಾರಗಳ ಮೇಲೆ ಆರೋಪ ಪಟ್ಟಿ ತಯಾರಿಸಿ, ಬಂಧನಕ್ಕೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+