ಹೈದರಾಬಾದಿನಲ್ಲೂ ಕೆರೆ ನುಂಗಿದ ಜನಾರ್ದನ ರೆಡ್ಡಿ

reddy-land-encroachment-in-hyderabad-ysr-helps
ಹೈದರಾಬಾದ್, ನ.25 : ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್‌ಆರ್ ಕೃಪಾಕಟಾಕ್ಷದಿಂದ ಜನಾರ್ದನ ರೆಡ್ಡಿ ರಾಜಧಾನಿಯ ಹೊರವಲಯದಲ್ಲಿ ವಿಮಾನ ನಿಲ್ದಾಣದ ರಸ್ತೆ ಬದಿಯಲ್ಲಿರುವ ಫ‌ಲವತ್ತಾದ ನೀರಾವರಿ ಜಮೀನು ಹಾಗೂ ಕೆರೆ ಜಾಗವನ್ನು ಕಬಳಿಸಿದ್ದಾರೆ.

ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸಲು ಸಿಬಿಐ ಹಾಗೂ ಆಂಧ್ರ ಸರ್ಕಾರ ಜಂಟಿ ಕಾರ್ಯಾಚರಣೆ ಆರಂಭಿಸಿವೆ. ಗಮನಾರ್ಹವೆಂದರೆ, ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ರೆಡ್ಡಿ ಜೈಲುಪಾಲಾಗಿದ್ದರೂ ಅವರ ಜಾಮೀನಿಗೆ ಉರುಳಾಗಿರುವುದು ಹೈದರಾಬಾದಿನಲ್ಲಿನ ಭೂಹಗರಣ ಎನ್ನಲಾಗಿದೆ.

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಹಣವನ್ನು ಆಂಧ್ರದಲ್ಲಿ ಬ್ರಹ್ಮಿಣಿ ಅವಿನ್ಯೂ ನಿರ್ಮಾಣಕ್ಕೆ ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಖಚಿತಗೊಂಡಿದೆ. ಇದರ ಜತೆಗೆ 40 ರಿಂದ 50 ಕೋಟಿ ರೂ. ಬೆಲೆ ಬಾಳುವ ಕೆರೆಗೆ ರೆಡ್ಡಿ ಬಳಗ ಕಾಂಪೌಂಡ್‌ ನಿರ್ಮಿಸಲು ರಾಜಶೇಖರ ರೆಡ್ಡಿ ಸರ್ಕಾರ ಸಂಪೂರ್ಣ ಸಹಕಾರ ನೀಡಿದ್ದರಿಂದ ಆಂಧ್ರದ ಐಎಎಸ್‌ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅನಂತಪುರ, ಚಿತ್ತೂರು, ಕರ್ನೂಲ್‌, ಕಡಪ ಜಿಲ್ಲೆಗಳ ಸುತ್ತಮುತ್ತ 400 ಎಕರೆ ಸರ್ಕಾರಿ ಜಮೀನನ್ನು ರೆಡ್ಡಿ ಬಳಗ ಕಬಳಿಸಿರುವ ಬಗ್ಗೆ ಆಂಧ್ರ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ಹೈದರಾಬಾದ್‌ ಹೊರವಲಯದ ದುಗ್ಗಾ ಚೆರ್ಲಾದಲ್ಲಿರುವ 140 ಎಕರೆ ವ್ಯಾಪ್ತಿಯ ಶ್ರೀಸಾಯಿ ವೆನ್‌ ಹೆಲ್ತ್‌ ವಿಲೇಜ್‌ನಲ್ಲಿ ನಡೆದಿರುವ ಅವ್ಯವಹಾರ ಪತ್ತೆ ಮಾಡಲು ಹೆಚ್ಚು ಆಸಕ್ತಿವಹಿಸಿ ಸಿಬಿಐಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+