ಇದು ಯಡಿಯೂರಪ್ಪ ಮೇಲಿನ ತಾಜಾ ಭೂ ಹಗರಣ ಕೇಸ್

ಡಿನೋಟಿಫಿಕೇಷನ್ ಪ್ರಕರಣದ ಕೇಸ್ ಗಳ ಜಂಜಾಟದಿಂದ ಕೊಂಚ ರಿಲೀಫ್ ಪಡೆದಿರುವ ಯಡಿಯೂರಪ್ಪ ಅವರ ಮೇಲೆ ಅಕ್ರಮವಾಗಿ ಭೂ ಖರೀದಿಸಿದ ಆರೋಪವನ್ನು ಹೊರೆಸಲಾಗಿದೆ.
ವಕೀಲ ಬಿ ವಿನೋದ್ ಅವರು ಲೋಕಾಯುಕ್ತಕ್ಕೆ ನೀಡಿರುವ ದೂರಿನಂತೆ, ಯಡಿಯೂರಪ್ಪ ಹಾಗೂ ಅವರ ಕುಟುಂಬದವರು ಬೇನಾಮಿ ಕಂಪನಿಗಳ ಹೆಸರಿನಡಿಯಲ್ಲಿ 105 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಕಾನೂನು ಉಲ್ಲಂಘಿಸಿ ಖರೀದಿಸಿರುವ ಜಮೀನಿನ ಬೆಲೆ ಕೋಟಿಗಟ್ಟಲೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.
ಮಲ್ಲಿಗೆನಹಳ್ಳಿಯಲ್ಲಿ 11 ಎಕರೆ, ಉರಗದೂರು ನಲ್ಲಿ 2.5 ಎಕರೆ, ಹುಣಸೇಕಟ್ಟೆಯಲ್ಲಿ 45 ಎಕರೆ ಹಾಗೂ ಗುಡ್ದದ ಅರಕೆರೆಯಲ್ಲಿ 5.01 ಎಕರೆ ಜಮೀನನ್ನು ಅಕ್ರಮವಾಗಿ ಖರೀದಿಸಲಾಗಿದೆ ಎಂದು ಇಂಡಿಯಾ ಟುಡೇ ವಿವರವಾಗಿ ವರದಿ ಮಾಡಿದೆ.












Click it and Unblock the Notifications